International

ಸಂಘರ್ಷ ಸ್ಥಿತಿಯಲ್ಲಿ ಉಕ್ರೇನ್‌: ಭಾರತೀಯರ ಪರಿಸ್ಥಿತಿ ಚಿಂತಾಜನಕ

ಉಕ್ರೇನ್:‌ ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದೆ ಅದರಂತೆ ರಷ್ಯಾ ಗುರುವಾರ ಮುಂಜಾನೆ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಶುರು ಮಾಡಿದೆ, ಪೂರ್ವ ಉಕ್ರೇನ್‌ನ ಮರಿಯುಪೋಲ್ ನಗರದ ಮೇಲೆ ಬಾಂಬ್ ದಾಳಿ ನಡೆಸಿ,  ರಷ್ಯಾದ ಸೇನಾ ಪಡೆ ಈಗಾಗಲೇ ರಾಜಧಾನಿ ಕೀವ್‌ಗೆ ನುಸುಳಿವೆ. ಯುದ್ಧದ ಆರಂಭದಿಂದಲೂ ಉಕ್ರೇನ್‌ನಲ್ಲಿ ನಾಗರೀಕರ ಜೀವನ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಉಕ್ರೇನ್ ಸರ್ಕಾರ ಈಗಾಗಲೇ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಯ ಬಗ್ಗೆ ಇಲ್ಲಿನ ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಉಕ್ರೇನಿಯನ್ ಸಹಾಯದೊಂದಿಗೆ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕಳುಹಿಸಲು ಏರ್ ಇಂಡಿಯಾ ಮೂರು ವಿಮಾನಯಾನ ಸಂಸ್ಥೆಗಳನ್ನು ಪ್ರಾರಂಭಿಸಿತ್ತು. ಅದರ ಭಾಗವಾಗಿ ಉಕ್ರೇನ್‌ನಿಂದ ದೆಹಲಿಗೆ ಮಂಗಳವಾರ ಒಂದು ವಿಮಾನ  246 ಭಾರತೀಯರು ಸುರಕ್ಷಿತವಾಗಿ ಕರೆತಂದಿದೆ. ಎರಡನೇ ಸೇವೆಯ ಭಾಗವಾಗಿ ಗುರುವಾರ ಬೆಳಗಿನ ಜಾವ ಹೊರಟಿದ್ದ ಏರ್ ಇಂಡಿಯಾ ವಿಮಾನ ಉಕ್ರೇನ್‌ ತಲುಪದಯೇ ವಾಪಸ್‌ ಆಗಿದೆ. ಅಷ್ಟರಲ್ಲಾಗಲೇ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಅನ್ನು ಮುತ್ತಿಗೆ ಹಾಕುತ್ತಿದ್ದು, ವಾಯುಪ್ರದೇಶದಲ್ಲಿ ಅಪಾಯವಿದೆ ಎಂದು ಉಕ್ರೇನ್ ಸರ್ಕಾರ ಎಚ್ಚರಿಸಿದೆ. ಕೀವ್‌ಗೆ ತೆರಳಬೇಕಿದ್ದ ಏರ್ ಇಂಡಿಯಾ ಎಐ1947 ವಿಮಾನವನ್ನು ಬೇರೆಡೆಗೆ ತಿರುಗಿಸಲಾಯಿತು.

ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಸುರಕ್ಷಿತ ಪ್ರದೇಶಗಳಲ್ಲಿರಲು ಅವರಿಗೆ ಸೆಲ್ ಫೋನ್ ಮೂಲಕ ಸಂದೇಶ ಕಳುಹಿಸಲಾಗುತ್ತಿದೆ. ಶಾಂತಿ ಪರಿಸ್ಥಿತಿ ಸಮಯದಲ್ಲಿ ನಾಗರೀಕರನ್ನು ಸ್ಥಳಾಂತರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಲ್ಲಿವರೆಗೂ ಉಕ್ರೇನ್‌ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ. ಶಿಕ್ಷಣ ಮತ್ತು ವ್ಯಾಪಾರ ಸೇರಿದಂತೆ ವಿವಿಧ ಕಾರಣಗಳಿಗಾಗಿ ಸುಮಾರು 20,000 ಭಾರತೀಯರು ಉಕ್ರೇನ್‌ನಲ್ಲಿ ವಾಸಿಸುತ್ತಿದ್ದಾರೆ.

Share Post