National

ಕಾಶಿ ಅವಿನಾಶಿ ಆಗ್ತಿದೆ: ಪ್ರಧಾನಿ ನರೇಂದ್ರ ಮೋದಿ

 

ವಾರಣಾಸಿ: ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಕಾಶಿಯ ಬಗ್ಗೆ ಮಾತನಾಡಿದಷ್ಟೂ ಭಾವುಕನಾಗ್ತೀನಿ, ಕಾಶಿಯಲ್ಲಿರುವ ಪ್ರತಿಯೊಂದು ಕಲ್ಲು ಈಶ್ವರನ ಪ್ರತಿರೂಪವಾಗಿದೆ. ಕಾಶಿ ಅಭಿವೃದ್ಧಿ ಯೋಜನೆಗೆ ಯಾವುದೇ ಅಡೆತಡೆಗಳು ಬರದೆ ಯಶಸ್ವಿಯಾಗಿದೆ.  ವಿಶ್ವನಾಥನ ಆರಾಧಕರ ಪರಿಶ್ರಮವೂ ಕೂಡ ಇದಕ್ಕೆ ಕಾರಣವಾಗಿದೆ. ಕಾಶಿ ಅವಿನಾಶಿ ಆಗ್ತಿದೆ. ಪುಣ್ಯಭೂಮಿ ಅಹಿಂಸೆಯ ಪ್ರತೀಕ ಈ ಕಾಶಿ. ಇಲ್ಲಿ ಮಹದೇವನ ಇಚ್ಛೆಯಿಲ್ಲದೆ ಏನೂ ನಡೆಯುವುದಿಲ್ಲ, ಹಿಂದಿನ ಸರ್ಕಾರ ಕಾಶಿಯಲ್ಲಿ ಏನನ್ನೂ ಅಭಿವೃದ್ಧಿ ಮಾಡಿರಲಿಲ್ಲ, ಈಗ ಅಸಾಧ್ಯವಾದುದನ್ನು ಸಾಧ್ಯ ಮಾಡಲಾಗಿದೆ. ಕಾಶಿಯಲ್ಲಿ ಒಂದೇ ಸರ್ಕಾರವಿದೆ, ಯಾರ ಕೈಯಲ್ಲಿ ಢಮರುಗವಿದೆಯೋ ಅವರ ಸರ್ಕಾರವಿದೆ. ಭಾರತೀಯರಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸವಾಲು ಎಷ್ಟೇ ದೊಡ್ಡದಿದ್ದರೂ ಅದನ್ನು ಎದುರಿಸುತ್ತೇವೆ. ನಮ್ಮ ಸರ್ಕಾರ ಕೇವಲ ರಾಮಮಂದಿರವನ್ನು ನಿರ್ಮಿಸುತ್ತಿಲ್ಲ, ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗ್ತಿದೆ. ಜನರ ಸೇವೆಯೇ ಭಗವಂತನ ಸೇವೆ ಎಂದು ನಂಬಿದ್ದೇನೆ. ಜನರ ಸೇವೆ ಮಾಡಲು ಎಂದಿಗೂ ನಾನು ಬದ್ಧ. ಸ್ವಚ್ಛ ಭಾರತ ಯೋಜನೆ ಬಗ್ಗೆ ಮಾತನಾಡುತ್ತಾ ದೇಶ ಸ್ವಚ್ಚವಾಗಿದ್ರೆ ಅಭಿವೃದ್ದಿಗೆ ಬೆಲೆ ಜಾಸ್ತಿ ಎಂದರು.  ಸ್ವಚ್ಚತೆ, ಆವಿಷ್ಕಾರ ಆತ್ಮ ನಿರ್ಭರ ಭಾರತಕ್ಕೆ ನಿರಂತರ ನಮ್ಮ ಪ್ರಯತ್ನ ಎಂಬ ಕರೆಯನ್ನು ಕೊಟ್ಟರು.

Share Post