International

ದೇಶಕ್ಕಾಗಿ ಉಕ್ರೇನ್‌ ಸೇನೆ ಸೇರಿದ ಕ್ರೀಡಾಪಟುಗಳು:ಗನ್‌ ಹಿಡಿದು ಯುದ್ಧ ಭೂಮಿಯಲ್ಲಿ ಫೈರಿಂಗ್

ಉಕ್ರೇನ್‌:  ಸಾಮಾನ್ಯ ಜನರುಕೂಡ ಮಾತೃಭೂಮಿಗಾಗಿ ಸೈನಿಕರಾಗುತ್ತಿದ್ದಾರೆ. ಉಕ್ರೇನ್ ಆಟಗಾರರು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ನಾವು ರಷ್ಯಾ ವಿರುದ್ಧ ಹೋರಾಡಲು ಸಿದ್ಧರಿದ್ದೇವೆ ಎಂದು ಕ್ರೀಡಾಟುಗಳು ಉಕ್ರೇನ್‌ ಸೇನೆಗೆ ಸೇರಿದ್ದಾರೆ. ಮಾಡೆಲ್‌ಗಳು, ಮೇಯರ್‌ಗಳು, ಕ್ರೀಡಾಪಟುಗಳು ಮಾತ್ರವಲ್ಲದೆ ಸಾಮಾನ್ಯ ಜನರು ಸಹ ತಮ್ಮ ದೇಶಕ್ಕಾಗಿ ಹೋರಾಡಲು ಮುಂದಾಗುತ್ತಿದ್ದಾರೆ. ವೃದ್ಧರು ಮತ್ತು ಮಕ್ಕಳು ಸಹ ರಷ್ಯಾದ ವಿರುದ್ಧ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ. ಹಲವು ಉಕ್ರೇನ್ ಅಥ್ಲೀಟ್ ಗಳು ಕೂಡ ಸೇನೆಗೆ ಸೇರ್ಪಡೆಗೊಂಡು ದೇಶಪ್ರೇಮವನ್ನು ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಹಲವು ಆಟಗಾರರು ಸೇನೆ ಸೇರಿದ್ದಾರೆ. ಬಾಕ್ಸಿಂಗ್ ಲೆಜೆಂಡ್ಸ್ ವ್ಲಾಡಿಮಿರ್ ಮತ್ತು ವಿಟಾಲಿ ಕ್ಲಿಶ್ಕೊ ರಷ್ಯಾ ವಿರುದ್ಧ ಹೋರಾಡಲು ಸಿದ್ಧರಾಗಿದ್ದಾರೆ. ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಇತ್ತೀಚೆಗೆ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಡಿಮಿಟ್ರೊ ಪಿಡ್ರುಚ್ನಿ ಮಿಲಿಟರಿ ಉಡುಪಿನಲ್ಲಿ ಯುದ್ದಕ್ಕೆ ಪ್ರವೇಶಿಸಿದರು. ಡಿಮಿಟ್ರೊ ಮೂರು ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ್ದರು. ಬಯಾಥ್ಲಾನ್‌ನಲ್ಲಿ (ಸ್ಕೀಯಿಂಗ್, ಶೂಟಿಂಗ್) ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಚಳಿಗಾಲದ ಒಲಿಂಪಿಕ್ಸ್ ಬಳಿಕ ಕಳೆದ ವಾರವಷ್ಟೇ ಅವರು ತವರಿಗೆ ಮರಳಿದ್ದರು. ಈಗ ಸೇನಾ ಸಮವಸ್ತ್ರ ಧರಿಸಿ ರಾಷ್ಟ್ರ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಡಿಮಿಟ್ರೋ ಅವರು ಮಿಲಿಟರಿ ಸಮವಸ್ತ್ರದಲ್ಲಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅವರು ತಮ್ಮ ತವರು ಟೆರ್ನೋಪಿಲ್‌ನಲ್ಲಿ ಉಕ್ರೇನ್‌ನ ರಾಷ್ಟ್ರೀಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಟೆನಿಸ್ ಆಟಗಾರ ಸೆರ್ಗೆಯ್ ಸ್ಟಾಖೋವ್ಸ್ಕಿ, ಮಾಜಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ವೆಸಿಲ್ ಲೊಮಾಚೆಂಕೊ, ಮಾಜಿ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್ ಅಲೆಕ್ಸಾಂಡರ್ ಯೂಸೆಫ್ ಕೂಡ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡಿದ್ದಾರೆ.

Share Post