CrimeInternational

ಅಪಘಾತದಲ್ಲಿ ಗಾಯಗೊಂಡಿದ್ದರೂ ಅದೇ ಸ್ಥಿತಿಯಲ್ಲಿ ಸೆಲ್ಫಿಗೆ ಫೋಸ್‌ ಕೊಟ್ಟ ಯುವತಿಯರು!

ಕಾರು ಪಲ್ಟಿಯಾಗಿ ಅದರಲ್ಲಿದ್ದ ಯುವತಿಯರು ಗಾಯಗೊಂಡಿದ್ದರು.. ರಕ್ತ ಬರುತ್ತಿದ್ದರೂ ಅದನ್ನು ಲೆಕ್ಕಿಸದೇ ಬೀದಿಯಲ್ಲಿ ಹೇಗೆ ಬಿದ್ದಿದ್ದರೋ ಹಾಗೆಯೇ ಯುವತಿಯರು ಸೆಲ್ಫಿಗೆ ಫೋಸ್‌ ಕೊಟ್ಟಿದ್ದಾರೆ.. ಮೆಕ್ಸಿಕೋದಲ್ಲಿ ಕಾರು ಅಪಘಾತವಾಗಿದ್ದು, ಇಬ್ಬರು ಯುವತಿಯರು ತೀವ್ರವಾಗಿ ಗಾಯಗೊಂಡಿದ್ದರು.. ಇದನ್ನು ನೋಡಿದ ಸ್ಥಳೀಯರು ಆಂಬುಲೆನ್ಸ್‌ಗೆ ಕರೆ ಮಾಡಿದ್ದರು.. ಅಂಬ್ಯುಲೆನ್ಸ್‌ ಬರುವವರೆಗೂ ರಸ್ತೆಯಲ್ಲಿ ನೋವಿನೊಂದಿಗೆ ನರಳುತ್ತಿದ್ದ ಯುವತಿಯರು, ಮೊಬೈಲ್‌ ಹೊರತೆಗೆದು ಸೆಲ್ಫಿ ತೆಗೆದಿದ್ದಾರೆ.. ಇದನ್ನು ನೋಡು ಸಾರ್ವಜನಿಕರು ಬೇಸ್ತು ಬಿದ್ದಿದ್ದಾರೆ..

ನ್ಯೂಯಾರ್ಕ್ ಪೋಸ್ಟ್  ಈ ಬಗ್ಗೆ ವರದಿ ಮಾಡಿದೆ.. ಇಬ್ಬರು ಯುವತಿಯರು ಮೆಕ್ಸಿಕನ್‌ ನಗರದ ಕ್ಯುರ್ನಾವಾಕಾದ ಬೀದಿಗಳಲ್ಲಿ ಹೋಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ.. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.. ಕಾರಿನಲ್ಲಿ ಐವರು ಯುವತಿಯರಿದ್ದರು.. ಇದರಲ್ಲಿ ಇಬ್ಬರು ಯುವತಿಯರು ತೀವ್ರವಾಗಿ ಗಾಯಗೊಂಡಿದ್ದಾರೆ.. ಇಬ್ಬರನ್ನೂ ಸಾರ್ವಜನಿಕರು ಫುಟ್‌ ಪಾತ್‌ನಲ್ಲಿ ಕೂರಿಸಿದ್ದರು.. ಈ ವೇಳೆ ಅವರು ಸೆಲ್ಫಿಗೆ ಫೋಸ್‌ ಕೊಟ್ಟಿದ್ದಾರೆ..

 

Share Post