CrimeInternationalNational

6 ಕೋಟಿ ರೂಪಾಯಿ ಚಿನ್ನಾಭರಣ ಖರೀದಿಸಿದ ಮಹಿಳೆ..!; ಆ ವ್ಯಾಪಾರಿ ಏನು ಮಾಡಿದ್ದ ಗೊತ್ತಾ..?

ಆಕೆ ಅಮೆರಿಕದ ಮಹಿಳೆ… ಚಿನ್ನಾಭರಣ ಅಂದ್ರೆ ಆಕೆಗೆ ಪಂಚಪ್ರಾಣ.. ಭಾರತದಲ್ಲಿ ಒಳ್ಳೊಳ್ಳೆ ಡಿಸೈನ್‌ ಸಿಗುತ್ತೆ ಅಂತ ಭಾರತಕ್ಕೆ ಬಂದಿದ್ದಳು… ರಾಜಸ್ಥಾನದಲ್ಲಿ ಜುವೆಲರಿಯ ಅಂಗಡಿಯವನೊಬ್ಬನಿಗೆ ಚಿನ್ನಾಭರಣ ತಯಾರಿಯ ಆರ್ಡರ್‌ ಕೊಟ್ಟಿದ್ದಳು.. ಅದು ಅಷ್ಟು ಇಷ್ಟು ಅಲ್ಲ, ಬರೋಬ್ಬರಿ 6 ಕೋಟಿ ರೂಪಾಯಿಯ ಆರ್ಡರ್‌ ಅದು.. ಭಾರಿ ಪ್ರಮಾಣದ ಆರ್ಡರ್‌ ಅನ್ನು ಆ ವಿದೇಶಿ ಮಹಿಳೆ ನಂಬಿ ಕೊಟ್ಟಿದ್ದಳು.. ಆತ ಕೂಡಾ ಹೇಳಿದ ಟೈಮ್‌ಗೆ ಆಭರಣಗಳನ್ನು ಮಾಡಿಕೊಟ್ಟಿದ್ದ.. ಅವುಗಳನ್ನು ಅಮೆರಿಕಗೆ ತೆಗೆದುಕೊಂಡು ಹೋಗಿದ್ದ ಮಹಿಳೆ ಪ್ರದರ್ಶನಕ್ಕಿಟ್ಟಿದ್ದಳು.. ಈ ವೇಳೆ, ಅಲ್ಲಿ ಬಂದವರು ಅವು ನಿಜವಾದ ಚಿನ್ನದ ಆಭರಣಗಳಲ್ಲ, 6 ಕೋಟಿ ರೂಪಾಯಿ ಅಲ್ಲ, 6 ಸಾವಿರ ಕೂಡಾ ಬೆಲೆ ಬಾಳಲ್ಲ ಎಂದು ಹೇಳಿದ್ದಾರೆ.. ಪರೀಕ್ಷೆ ಮಾಡಿಸಿ ನೋಡಿದಾಗ ಆ ಮಹಿಳೆಗೆ ಮೋಸ ಹೋಗಿರುವುದು ಗೊತ್ತಾಗಿದೆ..

ಜೈಪುರದ ಜೊಹ್ರಿ ಬಜಾರ್‌ನಲ್ಲಿರುವ ಚಿನ್ನದ ಅಂಗಡಿ ಮಾಲೀಕರಿಂದ ಅಮೆರಿಕದ ಮಹಿಳೆ ಚೆರಿಶ್ 6 ಕೋಟಿ ರೂಪಾಯಿ ಚಿನ್ನದ ಆಭರಣಗಳಿಗೆ ಆರ್ಡರ್‌ ಮಾಡಿದ್ದಳು.. ಆದ್ರೆ ಆತ ಚಿನ್ನದ ಪಾಲಿಶ್‌ ಮಾಡಿದ ನಕಲಿ ಆಭರಣಗಳನ್ನು ಕೊಟ್ಟಿದ್ದ..  ಉತ್ತಮ ಗುಣಮಟ್ಟದ ಚಿನ್ನಾಭರಣದ ಹೆಸರಿನಲ್ಲಿ ಒಂದಲ್ಲ ಎರಡು ಬಾರಿ ಆರು ಕೋಟಿ ರೂಪಾಯಿ ದರೋಡೆ ಮಾಡಿದ್ದ..
ಅಮೆರಿಕದಲ್ಲಿ ನಡೆದ ಪ್ರದರ್ಶನದಲ್ಲಿ ಮಹಿಳೆ ಆಭರಣಗಳನ್ನು ಪ್ರದರ್ಶಿಸಿದರು. ಈ ಕ್ರಮದಲ್ಲಿ ಅವು ನಕಲಿ ಎಂದು ತಿಳಿದುಬಂದಿದೆ.

ಕೂಡಲೇ ಮಹಿಳೆ ಜೈಪುರಕ್ಕೆ ಬಂದು ಅಂಗಡಿ ಮಾಲೀಕ ಗೌರವ್ ಸೋನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ… ಆದ್ರೆ ಅಂಗಡಿ ಮಾಲೀಕರು ಆಕೆಯ ಆರೋಪವನ್ನು ನಿರಾಕರಿಸಿದ್ದಾರೆ. ಹೀಗಾಗಿ ಅಮೆರಿಕ ಮಹಿಳೆ ಚೆರಿಶ್ ಜೈಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಯುಎಸ್ ರಾಯಭಾರ ಕಚೇರಿಯ ಅಧಿಕಾರಿಗಳಿಂದ ಸಹಾಯವನ್ನು ಕೋರಿದ್ದಾರೆ. ಪ್ರತಿಕ್ರಿಯಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುವಂತೆ ಜೈಪುರ ಪೊಲೀಸರನ್ನು ಮನವಿ ಮಾಡಿಕೊಂಡಿದ್ದಾರೆ.

ಗೌರವ್ ಸೋನಿ 2022 ರಲ್ಲಿ Instagram ಮೂಲಕ ಸಂಪರ್ಕಕ್ಕೆ ಬಂದರು.. ಕಳೆದ ಎರಡು ವರ್ಷಗಳಿಂದ ರೂ. 6 ಕೋಟಿ ನೀಡಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಗೌರವ್ ಮತ್ತು ಆತನ ತಂದೆ ರಾಜೇಂದ್ರ ಸೋನಿ ತಲೆಮರೆಸಿಕೊಂಡಿದ್ದಾರೆ.. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share Post