International

ಪತ್ನಿಯ ಶೀಲ ಶಂಕಿಸಿದ ಪಾಪಿ ಪತಿ; ತಲೆ ಕತ್ತರಿಸಿ ಬೀದಿಯಲ್ಲಿ ಪ್ರದರ್ಶನ

ಟೆಹರಾನ್: ಇರಾನ್‌ನಲ್ಲಿ ದಾರುಣ ಕೃತ್ಯವೊಂದು ನಡೆಹೋಗಿದೆ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನೇ ಕತ್ತರಿಸಿದ್ದಾನೆ. ಅಷ್ಟೆಕ್ಕೇ ಮುಗಿದಿಲ್ಲ, ಆತನ ವಿಕೃತಿ. ಪತ್ನಿಯ ತಲೆಯನ್ನು ಬೀದಿಯಲ್ಲಿ ಪ್ರದರ್ಶಿಸಿ ವಿಕೃತ ಆನಂದಪಟ್ಟಿದ್ದಾನೆ.

ಇರಾನ್‌ನ ನೈರುತ್ಯ ಭಾಗದ ಅಹ್ವಾಜ್‌ ಎಂಬ ಸ್ಥಳದಲ್ಲಿ ಈ ಕೃತ್ಯ ನಡೆದಿದ್ದು, ಮೋನಾ ಹೈದರಿ ಎಂಬಾಕೆಯೇ ಗಂಡನಿಂದ ಕೊಲೆಗೀಡಾದ ನತದೃಷ್ಟೆ. ಮೋನಾ ಪತಿ ಹಾಗೂ ಸೋದರ ಮಾವ ಇಬ್ಬರೂ ಸೇರಿ ಈ ಕೊಲೆ ಮಾಡಿದ್ದಾರೆಂದು ಗೊತ್ತಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಇರಾನಿನ ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಆರೋಪಿಯ ವಿರುದ್ಧ ಕಿಡಿಕಾರಲಾಗಿದೆ.

Share Post