UKRAINE-RUSSIA WAR; ರಷ್ಯಾ ದಾಳಿಗೆ ಕರ್ನಾಟಕ ವಿದ್ಯಾರ್ಥಿ ಬಲಿ..!
ಖಾರ್ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಖಾರ್ಕೀವ್ ಹಾಗೂ ಕೀವ್ ನಗರಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಈ ದಾಳಿ ವೇಳೆ ಕರ್ನಾಟಕ ಮೂಲದ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಖಾರ್ಕೀವ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಬಲಿಯಾಗಿದ್ದಾನೆ. ಈ ವಿಚಾರವನ್ನು ಕೇಂದ್ರ ವಿದೇಶಾಂಗ ಸಚಿವಾಲಯಯ ಖಚಿತಪಡಿಸಿದೆ.
ಮೃತ ವಿದ್ಯಾರ್ಥಿ ಹೆಸರು ನವೀನ್ ಎಸ್.ಜಿ. ಎಂದು ಗೊತ್ತಾಗಿದೆ. ನವೀನ್ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದವರು ಎಂದು ಗೊತ್ತಾಗಿದೆ. ಇವರು ಖಾರ್ಕೀವ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದ ನವೀನ್. ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ವಿದ್ಯಾರ್ಥಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.
ಸಹಪಾಠಿಗಳು ಹೇಳುವ ಪ್ರಕಾರ ನವೀನ್ ಅವರು ಕರೆನ್ಸ್ ಎಕ್ಸ್‌ಚೇಂಜ್ ಮಾಡಿಸಲು ಸೂಪರ್ ಮಾರ್ಕೆಟ್‌ಗೆ ಹೋಗಿದ್ದರು. ಈ ಸಮಯದಲ್ಲಿ ಶೆಲ್ ದಾಳಿಯಾಗಿದ್ದು, ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.