International

ಕೀವ್‌ ವಶಪಡಿಸಿಕೊಳ್ಳಲು ರಷ್ಯಾ ಸನ್ನದ್ದ-ಮತ್ತಷ್ಟು ಸೇನೆ, ಬೆಂಗಾವಲು ಪಡೆ ಉಕ್ರೇನ್‌ ಕಡೆಗೆ

ಕೀವ್:‌  ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಶಪಡಿಸಿಕೊಳ್ಳಲು ಸತತ ಪ್ರಯತ್ನ ಮಾಡ್ತಿದಾರೆ. ಒಂದೆಡೆ ಬೆಲಾರಸ್‌ನಲ್ಲಿ ಮಾತುಕತೆ ಮತ್ತೊಂದೆಡೆ ಯುದ್ಧ.  ರಷ್ಯಾ ಮತ್ತು ಉಕ್ರೇನ್ ನಡುವೆ ನಿನ್ನೆ ನಡೆದ ಮಾತುಕತೆ ಯಶಸ್ವಿಯಾಗಲಿಲ್ಲ. ಎರಡೂ ಕಡೆಯವರು ಮತ್ತೊಮ್ಮೆ ಮಾತುಕತೆ ನಡೆಸುವುದಾಗಿ ಘೋಷಿಸಿದ್ದಾರೆ.

ಒಳಗೆ ನಡೆದ ಚರ್ಚೆ ಏನೆಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್‌ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ರಷ್ಯಾದ ಯುದ್ಧವಿಮಾನಗಳು ಮಾತ್ರ ಕೀವ್‌ ಕಡೆಗೆ ಇರುವ ಸಾಲಿನ ಹಾಗೆ ಹಿಂಡು ಹಿಂಡನ್ನು ಹೋಗುತ್ತಿವೆ.  ಈ ಯುದ್ಧ ವಾಹನಗಳು ಒಂದಲ್ಲ ಎರಡು ಎರಡಲ್ಲ 64 ಕಿಲೋಮೀಟರ್ ಉದ್ದದ ರಷ್ಯಾದ ಸೈನ್ಯದ ಬೆಂಗಾವಲು ವಾಹನಗಳು ಕೀವ್ ಕಡೆಗೆ ಹೋಗುತ್ತಿರುವುದನ್ನು ಯುಎಸ್ ಉಪಗ್ರಹಗಳು ಪತ್ತೆ ಮಾಡಿವೆ.

ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಕೀವ್‌ ರಷ್ಯಾ ವಶದಲ್ಲಿರಬೇಕಿತ್ತು. ಆದರೆ ಉಕ್ರೇನಿಯನ್ ಸೈನ್ಯದ ಅನಿರೀಕ್ಷಿತ ಪ್ರತಿರೋಧದಿಂದಾಗಿ ಇದು ಸಾಧ್ಯವಾಗಿಲ್ಲ.ನ್ಯಾಟೋ ದೇಶಗಳು ಒದಗಿಸಿದ ಶಸ್ತ್ರಾಸ್ತ್ರಗಳಿಂದ ರಷ್ಯಾ ದಾಳಿ ಸ್ವಲ್ಪ ಕಡಿಮೆಯಾಗಿದೆ. ರಷ್ಯಾದ ಪಡೆಗಳು ಹಿಂದೆ ಸರಿದಿದ್ದು ಮತ್ತಷ್ಟು ಆಕ್ರಮಣಕಾರಿಯಾಗಿ ಜಿಗಿಯಲು  ಎಂದು ಈಗ ತಿಳಿದುಬಂದಿದೆ.

ಈ ಬಾರಿ ಜನವಸತಿ ಪ್ರದೇಶ, ಸೇನೆ ಎಂಬ ಭೇದವಿಲ್ಲದೆ ಎಲ್ಲ ಪ್ರದೇಶಗಳನ್ನೂ ಗುರಿಯಾಗಿಸಿಕೊಂಡಿದ್ದಾರೆ. ಎಲ್ಲ ಜನರು ಕೀವ್ ತೊರೆಯಬೇಕು ಎಂಬ ರಷ್ಯಾ ಎಚ್ಚರಿಕೆಯನ್ನು ನೀಡಿದೆ. ಈ ಎಚ್ಚರಿಕೆಯನ್ನು ನೋಡಿದ್ರೆ ರಷ್ಯಾ ಸೇನೆ ತನ್ನ ದಾಳಿಯನ್ನು ತೀವ್ರಗೊಳಿಸಲು ನಿರ್ಧರಿಸಿರುವುದು ಸ್ಪಷ್ಟವಾಗಿದೆ. ಈಗಾಗಲೇ ಯುಎಸ್ ಉಪಗ್ರಹಗಳು 64 ಕಿಲೋಮೀಟರ್ ಉದ್ದದ ರಷ್ಯಾದ ಸೈನ್ಯದ ಬೆಂಗಾವಲು ಪಡೆಗಳನ್ನು ಗುರುತಿಸಿವೆ.

Share Post