ಪೇಜಾವರ ಮಠಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ; ಗೋವಿನ ಬೆಳ್ಳಿ ತುಲಭಾರ
ಬೆಂಗಳೂರು; ಸಚಿವ ರಾಮಲಿಂಗಾರೆಡ್ಡಿಯವರು ಬೆಂಗಳೂರಿನ ಬಸವನಗುಡಿ, ವಿದ್ಯಾಪೀಠ ಸರ್ಕಲ್ ಬಳಿ ಇರುವ ಪೇಜಾವರ ಮಠಕ್ಕೆ ಭೇಟಿ ನೀಡಿ ಗೋಪೂಜೆ ಮತ್ತು ಗೋವಿನ ಬೆಳ್ಳಿ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸಚಿವರಿಗೆ ತುಲಾಭಾರ ಸೇವೆಯನ್ನು ನಡೆಸಿಕೊಟ್ಟರು. ಇನ್ನು ಡಾ.ಪ್ರನಂಜನ್ ಆಚಾರ್ಯರು ಪ್ರವಚನ ನೀಡುತ್ತಾ, ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಪ್ರಾಣಿಗಳ ಮೇಲೆ ಇರುವ ಕಾಳಜಿಯನ್ನು ಶ್ಲಾಘಿಸಿದರು.
ಗೋಹತ್ಯೆ ಮಾತ್ರವಲ್ಲ, ಯಾವ ಪ್ರಾನಿಯ ಹತ್ಯೆ ಕೂಡಾ ಆಗಬಾರದು. ಪ್ರಪಂಚದಲ್ಲಿ ೮೪ ಲಕ್ಷ ಜೀವರಾಶಿಗಳಿವೆ. ಪ್ರತಿಯೊಂದು ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂದು ಸ್ವಾಮೀಜಿ ಹೇಳಿದರು.
ರಾಮಲಿಂಗಾರೆಡ್ಡಿಯವರು ಮುಜರಾಯಿ ಇಲಾಖೆ ಸಚಿವರಾದ ಮೇಲೆ ಅರ್ಚಕರು ಮೃತಪಟ್ಟರೆ ಅವರ ಕುಟುಂಬಗಳಿಗೆ ಎರಡು ಲಕ್ಷ ಪರಿಹಾರ ಯೋಜನೆ ತಂದಿದ್ದಾರೆ. ನಿವೃತ್ತರಾದ ದೇವಸ್ಥಾನದ ನೌಕರರು, ಅರ್ಚಕರಿಗೆ ಎರಡು ಲಕ್ಷ ರೂಪಾಯಿ ಹಣ, ಅವರ ಮಕ್ಕಳಿಗೆ ವಿದ್ಯಾರ್ಥಿವೇತನ, ಅರ್ಚಕರಿಗೆ ಉಚಿತವಾಗಿ ಕಾಶಿಯಾತ್ರೆ ವ್ಯವಸ್ಥೆ ಮಾಡಿದ್ದಾರೆ ಎಂದು ಸ್ವಾಮೀಜಿ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಯಸಿಂಹ ಹಾಗೂ ನಿರಂಜನ್ ರಾವ್ ಇದ್ದರು.