International

ಕೆನಡಾದಲ್ಲಿ ಭಾರಿ ಚಳಿ; ಭಾರತದ ಮೂಲದ ಒಂದೇ ಕುಟುಂಬದ ನಾಲ್ವರ ದುರ್ಮರಣ

ಟೊರೆಂಟೋ: ಕೆನಡಾದ ಟೊರೆಂಟೋದ ಮನಿಟೋಬಾ ಎಂಬಲ್ಲಿ ಭಾರತದ ಮೂಲದ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆನಡಾದಲ್ಲಿ ವಿಪರೀತ ಚಳಿ ಇದ್ದು, ಚಳಿಗೆ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಗುಜರಾತ್‌ ಮೂಲದವರಾದ ಜಗದೀಶ್‌ ಬಲದೇವ್‌ ಪಟೇಲ್‌, ವೈಶಾಲಿ ಬೆನ್‌ ಹಾಗೂ ಅವರ ಮಕ್ಕಳಾದ ವಿಹಂಗಿ, ಧಾರ್ಮಿಕ್‌ ಮೃತ ವ್ಯಕ್ತಿಗಳು.

   ಕೆಲಸಕ್ಕಾಗಿ ಟೊರೆಂಟೋದಲ್ಲಿ ನೆಲೆಸಿದ್ದ ಕುಟುಂಬ ಹಲವು ವರ್ಷಗಳಿಂದ ಇಲ್ಲಿಯೇ ವಾಸವಿತ್ತು. ಆದ್ರೆ ಈಗ ಚಳಿಗಾಲವಾದ್ದರಿಂದ ಹೆಚ್ಚಿನ ಚಳಿ ಇದೆ. ಭಾರತಕ್ಕೂ ಅಲ್ಲಿಗೂ ವಾತವಾರಣ ತುಂಬಾನೇ ವ್ಯತ್ಯಾಸವಿದೆ. ಉಷ್ಣಾಂಶ ಮೈನಸ್‌ ಇದ್ದಿದ್ದರಿಂದ ಈ ಕುಟುಂಬಕ್ಕೆ ಹೊಂದಿಕೊಳ್ಳಲು ಕಷ್ಟವಾಗಿದೆ. ಭಾರಿ ಚಳಿಯ ಕಾರಣದಿಂದಾಗಿ ರಕ್ತ ಹೆಪ್ಪುಗಟ್ಟಿ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಕೆನಡಾ ಪ್ರಾಧಿಕಾರ ಭಾರತದ ಹೈಕಮೀಷನ್‌ಗೆ ಮಾಹಿತಿ ನೀಡಿದೆ. ಮೃತದೇಹಗಳನ್ನು ಭಾರತಕ್ಕೆ ತರಲು ಎಲ್ಲಾ ಪ್ರಯತ್ನಗಳೂ ನಡೆಯುತ್ತಿವೆ.

Share Post