International

ಏರ್‌ಟೆಲ್‌ನಲ್ಲಿ 7500 ಕೋಟಿ ಹೂಡಿದ ಗೂಗಲ್

ನವದೆಹಲಿ : ಭಾರತದ ಪ್ರಮುಖ ಸಂಪರ್ಕ ಸೇವೆ ಸಂಸ್ಥೆಯಾಗಿರುವ ಏರ್‌ಟೆಲ್‌ ಮೇಲೆ ಟೆಕ್‌ ದೈತ್ಯ ಗೂಗಲ್‌ ಒಂದು ಬಿಲಿಯನ್‌ ಡಾಲರ್‌ ಹೂಡಲು ಮುಂದಾಗಿದೆ. ನಮ್ಮ ಭಾರತದ ರೂಪಾಯಿ ಮೌಲ್ಯದಲ್ಲಿ ಅಂದಾಜು 7500 ಕೋಟಿ ರೂ ಹೂಡಲಿದೆ ಗೂಗಲ್‌ ಸಂಸ್ಥೆ

ಸುಂದರ್‌ ಪಿಚೈ ನೇತೃತ್ವದ ಗೂಗಲ್‌ ಸಂಸ್ಥೆಯು 700 ಮಿಲಿಯನ್‌ ಡಾಲರ್‌ ಹೂಡುವ ಮೂಲಕ ಶೇ 1.28ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಳ್ಳಲಿದೆ. ಇನ್ನು ಇದರೊಂದಿಗೆ 300ಮಿಲಿಯನ್‌ ಡಾಲರ್‌ ಅನ್ನು ಇತರೆ ವಾಣಿಜ್ಯ ಒಪ್ಪಂದಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿಕೊಂಡಿದೆ.

ಗೂಗಲ್‌ ಏರ್ಟೆಲ್‌ ಷೇರಿಗೆ ರೂಪಾಯಿ 734 ಮೊತ್ತದಲ್ಲಿ 5252ಕೋಟಿ ಹೂಡಿಕೆ ಮಾಡಲಿದೆ. ಇನ್ನು ಏರ್ಟೆಲ್‌ ತನ್ನ ಗ್ರಾಹಕರಿಗೆ ಪೂರೈಸುವ ಸಾಧನಗಳ ಅಭಿವೃದ್ಧಿಗಾಗಿ 2250 ಕೋಟಿಯಷ್ಟು ಹೂಡಿಕೆ ಮಾಡಲಿದೆ.

ಏರ್ಟೆಲ್‌ ಮತ್ತು ಗೂಗಲ್‌ ನಡುವಿನ ಒಪ್ಪಂದ ಹೊರಬೀಳುತ್ತಿದ್ದಂತೆ ಏರ್‌ಟೆಲ್‌ ಷೇರು ಶೇ.2ರಷ್ಟು ಏರಿಕೆ ಕಂಡಿದೆ.

Share Post