International

ಅಕ್ರಮ ಗಡಿ ಪ್ರವೇಶದ ವೇಳೆ ಹಸುಗೂಸು ಸೇರಿದಂತೆ ನಾಲ್ವರು ಭಾರತೀಯರು ಬಲಿ

ಅಮೆರಿಕಾ: ಅಕ್ರಮ ಗಡಿ ಪ್ರವೇಶ ಮಾಡುವ ವೇಳೆ ಹಿಮಪಾತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿರುವ ದಾರುಣ ಘಟನೆ ಅಮೆರಿಕಾ-ಕೆನಡಾ ಗಡಿಯಲ್ಲಿ ನಡೆದಿದೆ. ಮೃತಪಟ್ಟವರಲ್ಲಿ ಒಂದು ವಾರದ ಹಸುಳೆ ಕೂಡ ಇದ್ದುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಡಿ ಪ್ರವೇಶದ ವೇಲೆ ಕೆಲ ಮಂದಿಯನ್ನು ಕಸ್ಟಮ್ಸ್‌ ಅಧಿಕಾರಿಗಳಯ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಾವನ್ನಪ್ಪಿದವರೂ ಸೇರಿದಂತೆ ಕೆಲ ಭಾರತೀಯರು ಮಾನವ ಸಾಗಾಣಿಕೆ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಒಂದು ತಂಡ ಕೆನಡಾದ ಮಾನಿಟೋಬಾ ಪ್ರಾವಿನ್ಸ್‌ ನಿಂದ ಅಮೆರಿಕಾ ಗಡಿ ಪ್ರವೇಶದ ಮಾಡಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಮಾನಿಟೋಬಾ ಪ್ರಾಂತ್ಯ ಕೆನಡಾದ ಅತ್ಯಂತ ಶೀತ ಪ್ರದೇಶ ಯಾವ ಮಟ್ಟಿಗೆ ಎಂದರೆ ನಾಲ್ಕು ಅಡಿಗಳಷ್ಟು ಹಿಮ ಭೂಮಿ ಮೇಲ್ಭಾಗದಲ್ಲಿ ಆವರಿಸಿರುತ್ತದೆ. ಇಂತಹ ಸ್ಥಳದಲ್ಲಿ ಗಡ್ಡೆ ಕಟ್ಟಿದ ಮಂಜಿನಲ್ಲಿ ನಡೆಯುವುದು ಅಂದ್ರೆ ಸುಲಭದ ಮಾತಲ್ಲ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಗಡಿ ದಾಟುವ ಪ್ರಯತ್ನದಲ್ಲಿ ಒಂದು ವಾರದ ಹಿಂದೆ ಹುಟ್ಟಿದ ಹುಸುಗೂಸು ಸೇರಿದಂತೆ ದಂಪತಿ ಮತ್ತು ಅವರ ಮಗ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಂಜಿನಲ್ಲಿ ಸಿಲುಕಿ ಅವರು ಪ್ರಾಣ ಬಿಡುತ್ತಿದ್ದಂತೆ ಉಳಿದವರು ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ. ಈ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಇವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.
ಕೂಡಲೇ ಕೆನಡಾ ಭದ್ರತಾ ಸಿಬ್ಬಂದಿಯೊಂದಿಗೆ ಯುಎಸ್‌ನ ಅಧಿಕಾರಿಗಳು ಸೇರಿ ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಮಾಡಿದ್ದಾರೆ. ಈ ಮಾಹಿತಿಯನ್ನು ಚಿಕಾಗೋದ ಭಾರತೀಯ ರಾಯಭಾರಿ ಕಚೇರಿ ಹಾಗೂ ಕೆನಡಾದ ಟೊರಂಟೋನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಬಗ್ಗೆ ಭಾರತ ವಿದೇಶಾಂಗ ಸಚಿವ ಜೈ ಶಂಕರ್‌ ಸ್ಪಂದಿಸಿ ಮೃತದೇಹಗಳನ್ನು ಭಾರತಕ್ಕೆ ಕಳಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಮಾನವ ಕಳ್ಳ ಸಾಗಣಿಕೆ ಗುಂಪನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಮೆಕ್ಸಿಕೋ, ಯುಕೆ, ಕೆನಡಾ, ದೇಶಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯರು ಅಕ್ರಮ ಗಡಿ ಪ್ರವೇಶ ಮಾಡುತ್ತಿರುವುದಾಗಿ ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಭಾರತೀಯರು ಇಂತಹ ಕೆಲಸಗಳಲ್ಲಿ ಭಾಗಿಯಾಗಿರುವ ಯಾವುದೇ ರೀತಿಯ ಸಾಕ್ಷಿ ಇಲ್ಲ. ಕಳೆದ ಎರಡು ಮೂರು ವರ್ಷಗಳಿಂದ ಇಂತಹ ಕೆಲಸಕ್ಕೆ ಕೈ ಹಾಕುತ್ತಿರುವುದು ವಿಪರ್ಯಾಸ ಎಂದು ಇಮಿಗ್ರೇಷನ್‌ ಅಧಿಕಾರಿಗಳು ತಿಳಿಸಿದ್ದಾರೆ.

Share Post