International

OPERATION GANGA; ಹಂಗೇರಿಯಿಂದ ಹೊರಟ ಆರನೇ ವಿಮಾನ

ಹಂಗೇರಿ; ಹಂಗೇರಿಯಿಂದ ಮತ್ತೊಂದು ವಿಮಾನ ಭಾರತದತ್ತ ಹೊರಟಿದೆ. ಉಕ್ರೇನ್‌ನಿಂದ ಹಂಗೇರಿಗೆ ಬಂದಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಇದು ಭಾರತಕ್ಕೆ ಬರುತ್ತಿರುವ ಆರನೇ ವಿಮಾನವಾಗಿದೆ

ಹಂಗೇರಿಯ ಬುಡಾಪೆಸ್ಟ್‌ ವಿಮಾನ ನಿಲ್ದಾಣದಿಂದ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆಗಿದೆ. ಈ ವಿಮಾನದಲ್ಲಿ ಸುಮಾರು 240 ವಿದ್ಯಾರ್ಥಿಗಳಿದ್ದಾರೆ. ಸಂಜೆ ವೇಳೆಗೆ ಈ ವಿಮಾನ ದೆಹಲಿ ತಲುಪಲಿದೆ. ಅಲ್ಲಿಂದ ವಿದ್ಯಾರ್ಥಿಗಳನ್ನು ಅವರವರ ರಾಜ್ಯಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಈಗಾಗಲೇ ಐದು ವಿಮಾನಗಳು ಭಾರತಕ್ಕೆ ಬಂದಿವಬೆ. ಈ ವಿಮಾನಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ. ಇನ್ನು 17 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿದ್ದಾರೆ. ಅವರೆಲ್ಲರನ್ನೂ ಕರೆತರಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿಯೇ ಇಂದು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕೆಲವು ಸಚಿವರನ್ನು ಉಕ್ರೇನ್‌ ನೆರೆಯ ರಾಷ್ಟ್ರಗಳಿಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಸಚಿವರು ರೊಮಾನಿಯಾ, ಹಂಗೇರಿ ಹಾಗೂ ಪೋಲ್ಯಾಂಡ್‌ಗಳಿಗೆ ತೆರಳಲಿದ್ದು, ಅಲ್ಲಿನ ಆಡಳಿತದೊಂದಿಗೆ ಮಾತನಾಡಲಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತಕ್ಕೆ ಬರುವಂತೆ ನೋಡಿಕೊಳ್ಳಲಿದ್ದಾರೆ.

Share Post