ತಮಿಳುನಾಡಿನಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ
ಚೆನ್ನೈ: ತಮಿಳುನಾಡಿನಲ್ಲಿ 15 – 18 ವರ್ಷದೊಳಗಿನ ಶೇಕಡಾ 100ರಷ್ಟು ಶಾಲಾ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳೂ ಸ್ವಯಂ ಪ್ರೇರಿತರಾಗಿ ಮೊದಲ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳೂ ಅಂದರೆ, 15-18 ವರ್ಷದೊಳಗಿನವರು ಮೊದಲ ಡೋಸ್ ಪಡೆದಿದ್ದಾರೆ. ಆದರೆ ಶಾಲೆಗೆ ಹೋಗದ ಇದೇ ವಯಸ್ಸಿನವರು ಇನ್ನೂ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಬಾಕಿ ಇದೆ. ಹಲವರು ಲಸಿಕೆ ಪಡೆದಿಲ್ಲ. ಅಂತಹವರನ್ನು ಹುಡುಕಿ ಲಸಿಕೆ ಹಾಕುವ ಪ್ರಕ್ರಿಯೆ ನಡೆಯುತ್ತಿದೆ.
ಇದುವರೆಗೆ ತಮಿಳುನಾಡಿನಲ್ಲಿ 15-18 ವಯಸ್ಸಿನ ಶೇಕಡಾ 76 ಮಂದಿಗೆ ಲಸಿಕೆ ಹಾಕಲಾಗಿದೆ. ಶಾಲೆಗಳಲ್ಲಿ ಓದುತ್ತಿರುವವರು ಎಲ್ಲರೂ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ, ನಾನಾ ಕಾರಣದಿಂದ ಶಾಲೆಗೆ ಹೋಗದವರಲ್ಲಿ ಕೆಲವರು ಲಸಿಕೆ ಪಡೆದಿಲ್ಲ. ಅಂತಹವರಿಗೂ ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಮುಂದಾಗಿದ್ದಾರೆ. ಅಂತಹವರು ಎಲ್ಲಿದ್ದಾರೋ ಅಲ್ಲಿಗೇ ಹೋಗಿ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ.