National

ದೇಶದ ಕಿರಿಯ ಮೇಯರ್‌ ಜೊತೆ ಕಿರಿಯ ಶಾಸಕನ ಸಪ್ತಪದಿ ಫಿಕ್ಸ್‌

ತಿರುವನಂತಪುರಂ: ಕೇರಳದ ಆರ್ಯಾ ರಾಜೇಂದ್ರನ್‌ ತಿರುವನಂತಪುರಂ ಮೇಯರ್‌ ಆಗಿ ದೇಶದ ಅತಿ ಕಿರಿಯ ಮೇಯರ್‌ ಎನಿಸಿಕೊಂಡಿದ್ದರು. ಇದೀಗ ಇವರು ಕೇರಳದ ಅತ್ಯಂತ ಕಿರಿಯ ವಯಸ್ಸಿನ ಶಾಸಕನನ್ನು ವರಿಸುತ್ತಿದ್ದಾರೆ. ಹೌದು, ಶಾಸಕ ಸಚಿನ್‌ ದೇವ್‌ ಜೊತೆ ಆರ್ಯಾ ರಾಜೇಂದ್ರನ್‌ ವಿವಾಹ ನಿಶ್ಚಯವಾಗಿದೆ.

   ಎಡಪಕ್ಷದ ಅಭ್ಯರ್ಥಿಯಾಗಿ ಬಲುಸ್ಸೇರಿ ವಿಧಾಸಭಾ ಕ್ಷೇತ್ರದಿಂದ ಸಚಿನ್‌ ದೇವ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಆರ್ಯಾ ರಾಜೇಂದ್ರನ್‌ ಕೂಡಾ ಇದೇ ವಿಧಾನಸಭಾ ಕ್ಷೇತ್ರದವರೇ.. ಇಬ್ಬರೂ ಕೂಡಾ ವಿದ್ಯಾರ್ಥಿದೆಸೆಯಿಂದಲೇ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಎಸ್‌ಎಫ್‌ಐ ಮೂಲಕ ಹೋರಾಟ ನಡೆಸುತ್ತಿದ್ದರು. ಬಾಲ್ಯದಿಂದಲೇ ಪರಿಚಿತರಾಗಿರುವ ಇವರು, ಈಗ ಸಪ್ತಪದಿ ತುಳಿಯಲು ಸಿದ್ಧತೆ ನಡೆಸಿದ್ದಾರೆ.

Share Post