ಕೊನೆಗೂ ಪತ್ತೆಯಾಯ್ತು ಕೊಡಗಿನ ಬಾಲಕಿಯ ರುಂಡ; 50 ಮೀಟರ್ ದೂರದಲ್ಲೇ ಇತ್ತು ತಲೆ!
ಮಡಿಕೇರಿ; ಸೋಮವಾರ ಪೇಟೆಯಲ್ಲಿ ಮೊನ್ನೆ 16 ವರ್ಷದ ಬಾಲಕಿಯ ರುಂಡ ಕಡಿಯಲಾಗಿತ್ತು.. ಇತ್ತು ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿ ಹೊತ್ತಿಯ್ದಿದ್ದ ರುಂಡ ಕೂಡಾ ಸಿಕ್ಕಿದೆ.. ಕೊಲೆ ಮಾಡಿದ ಸ್ಥಳದಿಂದ 50 ಮೀಟರ್ ದೂರದಲ್ಲೇ ಆರೋಪಿ ರುಂಡವನ್ನು ಎಸೆದುಹೋಗಿದ್ದ.. ಆದ್ರೆ ಯಾರೂ ಅದನ್ನು ಗಮನಿಸಿಲ್ಲ.. ಇಂದು ಪೊಲೀಸರು ಆರೋಪಿಯನ್ನು ಕರೆತಂದು ಸ್ಥಳ ಮಹಜರು ನಡೆಸಿದ್ದು, ಈ ವೇಳೆ ರುಂಡ ಎಸೆದ ಜಾಗವನ್ನು ತೋರಿಸಿದ್ದಾನೆ.
ಗುರುವಾರ ಸಂಜೆ ಸೋಮವಾರಪೇಟೆ ತಾ. ಕುಂಬಾರಗಡಿಗೆ ಗ್ರಾಮ 10ನೇ ತರಗತಿ ಪಾಸ್ ಆಗಿದ್ದ ಬಾಲಕಿ ಮೀನಾಳನ್ನು ಕೊಲೆ ಮಾಡಲಾಗಿತ್ತು.. ಮೀನಾ ಪ್ರಿಯಕರ ಪ್ರಕಾಶನೇ ಈ ಕೊಲೆ ಮಾಡಿದ್ದ.. ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನದಂದೇ ಮೀನಾ ಹಾಗೂ ಆರೋಪಿ ಪ್ರಕಾಶ್ ನಿಶ್ಚಿತಾರ್ಥ ಇತ್ತು.. ಆದ್ರೆ ಮೀನಾ ಅಪ್ರಾಪ್ತಳಾಗಿದ್ದರಿಂದ ವಿಷಯ ತಿಳಿದ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದರು.. ಈ ಕಾರಣದಿಂದ ರೊಚ್ಚಿಗೆದ್ದಿದ್ದ ಆರೋಪಿ ಪ್ರಕಾಶ್, ಮೀನಾಳನ್ನು ಕರೆದುಕೊಂಡು ತಲೆ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದ. ರುಂಡವನ್ನು ಕೂಡಾ ಹೊತ್ತೊಯ್ದಿದ್ದ.
ಇಂದು ಆರೋಪಿಯನ್ನು ಬಂಧಿಸಿದ್ದು, ಅವನು ಯಾಕೆ ಕೊಲೆ ಮಾಡಿದ, ಘಟನಾ ಸ್ಥಳದಲ್ಲಿ ಏನು ನಡೀತು ಎಂಬುದರ ಬಗ್ಗೆ ಪೊಲೀಸರ ಮುಂದೆ ಮಾಹಿತಿ ಬಾಯ್ಬಿಟ್ಟಿದ್ದಾನೆ..