International

ಇನ್ಮೇಲೆ ಅಮೆರಿಕದಲ್ಲೂ ದೀಪಾವಳಿ ಹಬ್ಬಕ್ಕೆ ಸರ್ಕಾರಿ ರಜೆ

ಪೆನ್ಸಿಲ್ವೇನಿಯಾ; ದೀಪಾವಳಿ ಹಬ್ಬದ ಬಗ್ಗೆ ಹಲವು ದೇಶಗಳ ಜನರಿಗೆ ಕುತೂಹಲವಿದೆ. ಅಮೆರಿಕ ಮುಂತಾದ ದೇಶಗಳಲ್ಲಿ ದೀಪಾವಳಿ ಹಬ್ಬವನ್ನು ಕೆಲವರು ಆಚರಿಸಿ ಸಂಭ್ರಮಪಡುತ್ತಾರೆ ಕೂಡಾ. ಹೀಗಾಗಿಯೇ ಏನೋ ಅಮೆರಿಕದಲ್ಲಿ ದೀಪಾವಳಿ ಹಬ್ಬಕ್ಕೆ ರಜೆ ಘೋಷಣೆ ಮಾಡಲಾಗಿದೆ. ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ದೀಪಾವಳಿಯನ್ನು ರಾಷ್ಟ್ರೀಯ ರಜಾದಿನ ಎಂದು ಘೋಷಣೆ ಮಾಡಲಾಗಿದ್ದು, ಅಲ್ಲಿ ದೀಪಾವಳಿ ದಿನ ಸರ್ಕಾರಿ ರಜೆ ದೊರೆಯಲಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಪೆನ್ಸಿಲ್ವೇನಿಯಾ ಆಡಳಿತ ಈ ಆದೇಶವನ್ನು ಹೊರಡಿಸಿದೆ. ಪೆನ್ಸಿಲ್ವೇನಿಯಾ ಸೆನೆಟರ್ ನಿಖಿಲ್ ಸವಾಲ್ ಎಂಬುವವರು ಟ್ವೀಟ್‌ ಮಾಡಿ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

Share Post