International

ನ್ಯೂಯಾರ್ಕ್‌ನಲ್ಲಿರುವ ಮಹಾತ್ಮ ಗಾಂಧಿ ವಿಗ್ರಹ ಧ್ವಂಸ: ರಾಯಭಾರಿ ಕಛೇರಿ ಖಂಡನೆ

ಅಮೆರಿಕಾ: ನ್ಯೂಯಾರ್ಕ್‌ನಲ್ಲಿ 8 ಅಡಿ ಎತ್ತರದ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಇಂತಹ ಹೇಯ ಘಟನೆಯಿಂದ ಭಾರತೀಯರು ಹಾಗೂ ಅಮೆರಿಕಾದಲ್ಲರುವ ಭಾರತೀಯ ಪ್ರಜೆಗಳು ಆಘಾತಕ್ಕೊಳಗಾಗಿದ್ದಾರೆ. ಮ್ಯಾನ್‌ಹ್ಯಾಟನ್ ಬಳಿಯ ಯೂನಿಯನ್ ಸ್ಕ್ವೇರ್‌ನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯನ್ನು ಭಾರತದ ರಾಯಭಾರಿ ಕಛೇರಿ ತೀವ್ರವಾಗಿ ಖಂಡಿಸಿದೆ.

ನ್ಯೂಯಾರ್ಕ್‌ನಲ್ಲಿರುವ ಭಾರತದ ರಾಯಭಾರಿ ಕಛೇರಿ ಪ್ರತಿಮೆ ಧ್ವಂಸವನ್ನು ತೀವ್ರವಾಗಿ ಖಂಡಿಸಿದ್ದು, ಈ ಕುರಿತು ತಕ್ಷಣ ತನಿಖೆ ನಡೆಸುವಂತೆ ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅನ್ನು ಒತ್ತಾಯಿಸುತ್ತೇವೆ. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕುವವರೆಗೂ ಬಿಡಿವುದಿಲ್ಲ ಎಂದು ರಾಯಭಾರಿ ಕಚೇರಿ ಹೇಳಿದೆ.

8 ಅಡಿಯ ಕಂಚಿನ ಪ್ರತಿಮೆಯನ್ನು ಗಾಂಧಿ ಮೆಮೋರಿಯಲ್ ಇಂಟರ್ನ್ಯಾಷನಲ್ ಫೌಂಡೇಶನ್ ಅಕ್ಟೋಬರ್ 2, 1986 ರಂದು ಮಹಾತ್ಮರ 117 ನೇ ಜನ್ಮದಿನದ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಿತು. ಪ್ರತಿಮೆಯನ್ನು 2001 ರಲ್ಲಿ ತೆಗೆದುಹಾಕಲಾಗಿತ್ತು. ಆದರೆ 2002 ರಲ್ಲಿ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಲಾಯಿತು.

ಕಳೆದ ತಿಂಗಳು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಗಾಂಧಿ ಪ್ರತಿಮೆ ಮೇಲೂ ದಾಳಿ ನಡೆದಿತ್ತು. ದಾಳಿಯಲ್ಲಿ ಪ್ರತಿಮೆಯ ಕೆಲವು ಭಾಗ ಒಡೆದು ಹೋಗಿದೆ. ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿಗಳನ್ನು ಇಂತಹ ಕೆಲಸಗಳನ್ನು ಮಾಡುತ್ತಿರುವುದಾಗಿ ಮಾಹಿತಿ ನೀಡಿದೆ.

Share Post