InternationalTechTechnology

ಕೃತಕ ಬುದ್ಧಿಮತ್ತೆ ಬಳಸಿ EVM ಹ್ಯಾಕ್‌ ಮಾಡಬಹುದು; ಎಲಾನ್‌ ಮಸ್ಕ್‌!

ನವದೆಹಲಿ; ಕೃತಕ ಬುದ್ಧಿಮತ್ತೆ ಬಳಸಿ ಹ್ಯಾಕರ್‌ಗಳು ಚುನಾವಣೆಗೆ ಬಳಸುವ ಇವಿಎಂಗಳನ್ನು ಹ್ಯಾಕ್‌ ಮಾಡಲು ಸಾಧ್ಯವಾಗುತ್ತದೆ ಎಂದು ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ ಹೇಳಿದ್ದು, ಈ ವಿಚಾರ ಭಾರಿ ಸಂಚಲನ ಮೂಡಿಸಿದೆ.. ಇದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ..

ಇವಿಎಂ ಬಳಕೆ ಬಗ್ಗೆ ಭಾರತದಲ್ಲಿ ಕೆಲವರಿಂದ ಅಪಸ್ವರಗಳಿವೆ.. ಇವಿಎಂಗಳನ್ನು ದುರ್ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹಲವಾರು ಮಂದಿ ಅನುಮಾನಪಡುತ್ತಾರೆ.. ಹೀಗಿರುವಾಗಲೇ ಎಲಾನ್‌ ಮಸ್ಕ್‌ ಅವರು ಇಂತಹದ್ದೊಂದು ಅನುಮಾನ ವ್ಯಕ್ತಪಡಿಸಿದ್ದಾರೆ.. ಇವಿಎಂಗಳು ಸೇಫ್‌ ಅಲ್ಲ. ಅವುಗಳನ್ನು ಹ್ಯಾಕ್‌ ಮಾಡಲು ಸಾಧ್ಯವಾಗಬಹುದು.. ಹೀಗಾಗಿ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಬಾರದು ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ..

ಎಲಾನ್‌ ಮಸ್ಕ್‌ ಹೇಳಿಕೆಗೆ ಭಾರತದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈ ಬಗ್ಗೆ ಮಾತನಾಡಿರುವ ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು, ಡಿಜಿಟಲ್‌ ಹಾರ್ಡ್‌ವೇರ್‌ ಅನ್ನು ಯಾರೂ ಕೂಡಾ ತಯಾರಿಸೋದಕ್ಕೆ ಸಾಧ್ಯವಿಲ್ಲ.. ಯಾಕಂದ್ರೆ ಇವಿಎಂಗಳಿಗೆ ಯಾವ ಕಾರಣಕ್ಕೂ ಇಂಟರ್‌ನೆಟ್‌ ಆಗಲೀ, ಬ್ಲ್ಯೂ ಟೂತ್‌ ಆಗಲೀ, ವೈಫೈ ಆಗಲೀ ಅಳವಡಿಸಿರುವುದಿಲ್ಲ.. ಹೀಗಿರುವಾಗ ಅದನ್ನು ಹೇಗೆ ಹ್ಯಾಕ್‌ ಮಾಡಲು ಆಗುತ್ತದೆ ಎಂದು ರಾಜೀವ್‌ ಚಂದ್ರಶೇಖರ್‌ ಪ್ರಶ್ನೆ ಮಾಡಿದ್ದಾರೆ..

ಇನ್ನೊಂದೆಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಎಲಾನ್‌ ಮಸ್ಕ್‌ ಹೇಳಿಕೆಯನ್ನು ಸಮರ್ಥಿಸಿದ್ದಾರೆ.. ಇವಿಎಂಗಳು ಕಪ್ಪು ಪೆಟ್ಟಿಗೆಗಳಾಗಿವೆ ಎಂದೂ ರಾಹುಲ್‌ ಗಾಂಧಿ ಹೇಳಿದ್ದಾರೆ..

 

Share Post