International

ಉಕ್ರೇನ್‌ ಮೇಲೆ ರಷ್ಯಾ ಯುದ್ಧ; ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದೆ. ರಷ್ಯಾ ಯುದ್ಧ ಘೋಷಣೆಯಿಂದಾಗಿ ಪರಿಸ್ಥಿತಿ ದೊಡ್ಡ ಬಿಕ್ಕಟ್ಟಿನತ್ತ ತಿರುಗುವ ಅಪಾಯವಿದೆ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಕಳವಳ ವ್ಯಕ್ತಪಡಿಸಿದೆ. ಇನ್ನು ಉಕ್ರೇನ್‌ನಲ್ಲಿದ್ದ ಭಾರತದ ಪ್ರಜೆಗಳನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿದೆ. ಇಂದು ಬೆಳಗ್ಗೆ ಉಕ್ರೇನ್‌ನಿಂದ ವಿಶೇಷ ವಿಮಾನ ದೆಹಲಿಗೆ ಬಂದಿಳಿದಿದೆ. ಇನ್ನೂ ಕೆಲ ಭಾರತೀಯರು ಉಕ್ರೇನ್‌ನಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ.

 

 

Share Post