International

ವಿಶ್ವದ ನಂ1 ಶ್ರೀಮಂತ ELON MUSK ಪಾವತಿಸುವ ಟ್ಯಾಕ್ಸ್‌ ಎಷ್ಟು ಗೊತ್ತಾ ?

ನ್ಯೂಯಾರ್ಕ್‌ : ವಿಶ್ವದ ನಂ೧ ಶ್ರೀಮಂತ ಎನಿಸಿಕೊಂಡಿರುವ ಎಲೆಕ್ಟ್ರಿಕ್‌ ಕಾರ್‌ ತಯಾರಿಕಾ ಸಂಸ್ಥೆ ʼಟೆಸ್ಲಾʼದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಲೋನ್‌ ಮಸ್ಕ್‌ ಈ ವರ್ಷ ಪಾವತಿಸುವ ತೆರಿಗೆ ಮೊತ್ತವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ.

ಈ ವರ್ಷ ಎಲಾನ್‌ ಮಸ್ಕ್‌ ಅವರು ೧೧ ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ತೆರಿಗೆಯನ್ನು  ಪಾವತಿಸುವುದಾಗಿ ಬರೆದುಕೊಂಡಿದ್ದಾರೆ. ನಮ್ಮ ಭಾರತದ ರೂಪಾಯಿಯ ಲೆಕ್ಕದಲ್ಲಿ ಸುಮಾರು 83572 ಕೋಟಿಗೂ ಅಧಿಕ ಮೊತ್ತವನ್ನು ಟ್ಯಾಕ್ಸ್‌ ಕಟ್ಟಲಿದ್ದಾರೆ.

ಅಮೆರಿಕಾದ ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ ಎಲಿಜಬೆತ್‌ ವಾರೆನ್‌, ಎಲಾನ್‌ ಮಸ್ಕ್‌ ಅವರು ಎಲ್ಲವನ್ನೂ ತಾವೊಬ್ಬರೇ ಇಟ್ಟುಕೊಳ್ಳುವ ಬದಲು ತೆರಿಗೆ ಪಾವತಿಸಬೇಕು ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಎಲಾನ್‌ ಮಸ್ಕ್‌ ಅವರು ಇಂದು ತಮ್ಮ ತೆರಿಗೆ ಮೊತ್ತವನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ : ಈ ಫೋಟೋಗಾಗಿ 36 ವರ್ಷ ಕಾದಿದ್ದೀನಿ : ಸುದೀಪ್‌

Share Post