Districts

ಬೆಳಗಾವಿಯಲ್ಲಿ ಕಾವೇರಿದ ಪ್ರತಿಭಟನೆ:ನಾರಾಯಣಗೌಡ ಅರೆಸ್ಟ್

ಬೆಳಗಾವಿ: ಹಿರೇಬಾಗೇವಾಡಿ ಟೋಲ್ ‌ಬಳಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ ಕಾವು ಹೆಚ್ಚಾಗಿದೆ. ನಾರಾಯಣಗೌಡ ಬಣದಿಂದ ಎಂಇಎಸ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಸುವರ್ಣಸೌಧದಲ್ಲಿ ಮುಟ್ಟಾಳರು ಕೂತಿದ್ದಾರೆ. ಇವರೆಲ್ಲಾ ರಣಹೇಡಿಗಳು. ಖಾಕಿ ಮುಂದಿಟ್ಟುಕೊಂಡು ಪ್ರತಿಭಟನೆಯನ್ನು ಹತ್ತಿಕ್ಕಲಾಗುತ್ತಿದೆ. ಎಂಇಎಸ್‌ ನಿಷೇಧ ಮಾಡುವವರಗೆ ನಾವು ಹೋರಾಟ ಮಾಡ್ತೇವೆ ಎಂದು ಸರ್ಕಾರದ ವಿರುದ್ಧ ನಾರಾಯಣಗೌಡ ಫುಲ್‌ ಗರಂ ಆಗಿದ್ದಾರೆ. ಹೋರಾಟ ಹೆಚ್ಚಾಗ್ತಿದ್ದಂತೆ ನಾರಾಯಣಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾ ನಿರತರನ್ನು ಬಂಧಿಸುವ ವೇಳೆ ಮಹಿಳಾ ಕಾರ್ಯಕರ್ತರು ನೆಲದ ಮೇಲೆ ಬಿದ್ದು ಹೊರಳಾಡಿ, ನಮ್ಮದು ನಮ್ಮದು ಬೆಳಗಾವಿ ನಮ್ಮದು ಎಂದು ಘೋಷಣೆಗಳನ್ನು ಕೂಗಿದ್ದಾರೆ.

Share Post