International

ಅಲಸ್ಕಾದ ಪೂರ್ವ ದ್ವೀಪದಲ್ಲಿ 6.0 ತೀವ್ರತೆಯ ಭೂಕಂಪ

ಅಲಸ್ಕಾ: ಅಮೆರಿಕಾದ ಅಲಸ್ಕಾ ಆಂಡ್ರಿಯಾನೋಫ್ ದ್ವೀಪಗಳ ಪೂರ್ವ ಈಶಾನ್ಯ ಭಾಗದಲ್ಲಿ ಭೂಕಂಪ ಉಂಟಾಗಿದೆ. ಈಶಾನ್ಯ ಭಾಗದಿಂದ  681 ಕಿಮೀ  ದೂರದಲ್ಲಿ ಬೆಳಗ್ಗೆ  ಸುಮಾರು 10:47 ರ ಸುಮಾರಿಗೆ ಭೂಕಂಪನ ಆಗಿದ್ದು. ಅದರ ತೀವ್ರತೆ 6.0 ಪ್ರಬಲ ಭೂಕಂಪ ಸಂಭವಿಸಿದೆ ಎಂದು  ರಾಷ್ಟ್ರೀಯ ಭೂಕಂಪನಾ ಕೇಂದ್ರ ಮಾಹಿತಿ ನೀಡಿದೆ.

ಈ ಬಗ್ಗೆ  ರಾಷ್ಟ್ರೀಯ ಖಾಸಗಿ ಸುದ್ದಿ ಸಂಸ್ಥೆಯೊಂದು ಟ್ವೀಟ್‌ ಮಾಡಿ ಮಾಹಿತಿ ತಿಳಿಸಿದೆ. ಕಳೆದ ವರ್ಷ ಜೂನ್‌ ಮತ್ತು ಡಿಸೆಂಬರ್‌ ತಿಂಗಳಿನಲ್ಲೂ ಕೂಡ ಈ ಭಾಗದಲ್ಲಿ ಭೂಕಂಪನವಾಗಿ ಅಪಾರ ಧನಹಾನಿ ಉಂಟಾಗಿತ್ತು. ಭಯದಿಂದ ಜನ ರಸ್ತೆಗೆ ಬಂದು ನಿಲಲುವ ಪರಿಸ್ಥಿತಿ ಏರ್ಪಾಡಾಗಿತ್ತು. ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಗಳು ಬಾಯ್ಬಿಟ್ಟಿರುವ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗಿದ್ದವು. ಈ ನಡುವೆ ಮತ್ತೆ ಈ ವರ್ಷ ಮೊದಲ ಬಾರಿಗೆ ಅಲಸ್ಕಾದಲ್ಲಿ ಭೂಕಂಪ ಉಂಟಾಗಿದೆ. ಆದರೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ಭೂಕಂಪನಾ ಕೇಂದ್ರ ತಿಳಿಸಿದೆ.

Share Post