International

ಪಾಕಿಸ್ತಾನದಿಂದ ಡ್ರಗ್ಸ್‌ ರವಾನೆ; 400 ಕೋಟಿ ರೂ. ಮೌಲ್ಯದ ಹೆರಾಯಿನ್‌ ವಶ..!

ಕಚ್‌: ಕಚ್‌ನ ಜಖೌ ಕಡಲ ತೀರದಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದಿಂದ ಭಾರಿ ಪ್ರಮಾಣದ ಡ್ರಗ್ಸ್‌ ರವಾನೆಯಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಗುಜರಾತ್‌ನ ಎಟಿಎಸ್ ಮತ್ತು ಕೋಸ್ಟ್ ಗಾರ್ಡ್ ತಂಡದಿಂದ ಜಂಟಿ ಕಾರ್ಯಾಚರಣೆಯಲ್ಲಿ ಈ ಪ್ರಕರಣವನ್ನು ಭೇದಿಸಲಾಗಿದೆ.

ಅಲ್‌ ಹುಸೇನಿ ಎಂಬ ಪಾಕಿಸ್ತಾನಿ ದೋಣಿಯಲ್ಲಿ 77 ಕೆಜಿ ಹೆರಾಯಿನ್‌ ನ್ನು ಭಾರತಕ್ಕೆ ತರಲಾಗುತ್ತಿತ್ತು. ಈ ವಿಚಾರ ತಿಳಿದು ದಾಳಿ ನಡೆಸಲಾಯಿತು. ಈ ವೇಳೆ 400 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್‌ ಪತ್ತೆಯಾಗಿದೆ. ದೋಣಿಯಲ್ಲಿದ್ದ ಆರು ಮಂದಿ ಪಾಕಿಸ್ತಾನಿ ಆರೋಪಿಗಳನ್ನು ಬಂಧಿಸಲಾಗಿದೆ.

ಸಮುದ್ರ ಮಾರ್ಗದ ಮೂಲಕ ಭಾರತದ ಒಳನುಸುಳಲು ಯತ್ನಿಸಿದ್ದ ಪಾಕಿಸ್ತಾನಿಯರು ಈಗ ಬಂಧನಕ್ಕೊಳಗಾಗಿದ್ದಾರೆ. ಈ ಮೂಲಕ ಮತ್ತೆ ಪಾಕಿಸ್ತಾನದ ನಿಜಬಣ್ಣ ಬಯಲಾಗಿದೆ.

Share Post