ಕೆಪಿಎಸ್‌ಸಿ ಮರು ಪರೀಕ್ಷೆಗೆ ದಿನಾಂಕ ನಿಗದಿ
ಬೆಂಗಳೂರು: ಕೊನೆಗೂ ವಿದ್ಯಾರ್ಥಿಗಳ ಪ್ರಾರ್ಥನೆ ಫಲಿಸಿದೆ. ಶ್ರಮವಹಿಸಿ ಅಭ್ಯಾಸ ನಡೆಸಿದ್ದಕ್ಕೆ ಪ್ರತಿಫಲ ದೊರಕಿದೆ. ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳ ಅಳಲಿಗೆ ಲೋಕೋಪಯೋಗಿ ಇಲಾಖೆ ಸ್ಪಂದಿಸಿದೆ. ರೈಲು ವಿಳಂಬದಿಂದ ಗೈರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ದಿನಾಂಕವನ್ನು ಕೂಡ ಕರ್ನಾಟಕ ಲೋಕಸೇವಾ ಆಯೋಗವು ನಿಗದಿ ಮಾಡಿದೆ. ಇದೇ ಡಿಸೆಂಬರ್ 29 ರಂದು ಪರೀಕ್ಷೆ ದಿನಾಂಕ ನಿಗದಿಪಡಿಸಿದ್ದು. ಡಿಸೆಂಬರ್ 22ರೊಳಗೆ ರೈಲು ಬುಕಿಂಗ್ ಟಿಕೆಟ್ ಸಮೇತ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಇದೇ ಡಿಸೆಂಬರ್ 14ರಂದು ಲೋಕೋಪಯೋಗಿ ಸಹಾಯಕ ಅಭಿಯಂತರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ರೈಲು ಐದು ಗಂಟೆ ವಿಳಂಬವಾಗಿ ಬಂದಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. ಕಲಬುರಗಿ ರೈಲ್ವೆ ಹಳಿ ಮೇಲೆ ಕುಳಿತು ಮರುಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳು ಧರಣಿ ನಡೆಸಿದ್ರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಲೋಕೋಪಯೋಗಿ ಇಲಾಖೆ ಮತ್ತೆ ಪರೀಕ್ಷೆ ಬರೆಯಲು ಸಮ್ಮತಿ ಸೂಚಿಸಿದೆ.