International

ಚೀನಾದಲ್ಲಿ ಮತ್ತೊಂದು ವೈರಸ್‌ ಪತ್ತೆ; ಚಾಂಗ್‌ಚುನ್‌ ಪ್ರದೇಶ ಲಾಕ್‌ಡೌನ್‌

ಬೀಜಿಂಗ್: ಚೀನಾದಲ್ಲಿ ಹೊಸ ವೈರಸ್‌ ಭೀತಿ ಎದುರಾಗಿದ್ದು, ಚೀನಾದ ಈಶಾನ್ಯ ಕೈಗಾರಿಕಾ ಕೇಂದ್ರವಾದ  ಚಾಂಗ್ ಚುನ್ ನಲ್ಲಿ 9 ಮಿಲಿಯನ್ ನಿವಾಸಿಗಳ ಮೇಲೆ ಚೀನಾ ಲಾಕ್ ಡೌನ್ ಹೇರಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ನಿವಾಸಿಗಳು ಮನೆಯಲ್ಲಿಯೇ ಇರಬೇಕಾಗುತ್ತದೆ ಮತ್ತು ಮೂರು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸೂಚಿಸಲಾಗಿದೆ. ಇನ್ನು  ಅನಿವಾರ್ಯವಲ್ಲದ ವ್ಯಾಪಾರ, ವ್ಯವಹಾರಗಳನ್ನು ಮುಚ್ಚಲಾಗುತ್ತದೆ. ಜೊತೆಗೆ ಸಾರಿಗೆ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಆಡಳಿತ ತಿಳಿಸಿದೆ.

ಶುಕ್ರವಾರ ದೇಶಾದ್ಯಂತ 397 ಸ್ಥಳೀಯ ಪ್ರಸರಣದ ಪ್ರಕರಣಗಳನ್ನು ಚೀನಾ ವರದಿ ಮಾಡಿದೆ. ಅವುಗಳಲ್ಲಿ 98 ಚಾಂಗ್‌ಚುನ್ ಅನ್ನು ಸುತ್ತುವರೆದಿರುವ ಜಿಲಿನ್ ಪ್ರಾಂತ್ಯದಲ್ಲಿವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ.

 

Share Post