CrimeInternational

ರೋಮ್‌ನಲ್ಲಿ ದೋಣಿ ದುರಂತ; ಭಾರತ, ಪಾಕ್‌ನ 40ಕ್ಕೂ ಹೆಚ್ಚು ವಲಸಿಗರ ಸಾವು

ರೋಮ್; ರೋಮ್‌ನಲ್ಲಿ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ದುರಂತಕ್ಕೀಡಾಗಿದ್ದು, ಭಾರತೀಯರು ಸೇರಿ ನಲವತ್ತಕ್ಕೂ ಹೆಚ್ಚು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇಲ್ಲಿನ ಕ್ರೋಟೋನ್‌ ಕರಾವಳಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.

ಭಾರತ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ವಲಸಿಗರನ್ನು ದೋಣಿಯನ್ನು ಕೊಂಡೊಯ್ಯಲಾಗುತ್ತಿತ್ತು. ದೋಣಿಯಲ್ಲಿ ಸುಮಾರು 120 ಮಂದಿ ಇದ್ದರು ಎನ್ನಲಾಗಿದೆ. ದೋಣಿ ಸಮುದ್ರದಲ್ಲಿ ಹೋಗುತ್ತಿರುವಾಗ ಭೀಕರ ಅಲೆಗಳು ಎದ್ದಿವೆ. ಇದ್ರಿಂದಾಗಿ ದೋಣಿ ತುಂಡಾಗಿ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಾಗಲೇ 44 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Share Post