International

ಆಫ್ಘಾನಿಸ್ತಾನದ ಶಾಲೆಯಲ್ಲಿ ಬಾಂಬ್‌ ಸ್ಫೋಟ; ನಾಲ್ಕಕ್ಕೂ ಹೆಚ್ಚು ಮಂದಿ ಸಾವು..!

ಕಾಬೂಲ್‌: ಅಫ್ಗಾನಿಸ್ತಾನದ ಪಶ್ಚಿಮ ಕಾಬೂಲ್‌ನ ಪ್ರೌಢ ಶಾಲೆಯೊಂದರಲ್ಲಿ ಬಾಂಬ್‌ ಸ್ಫೋಟಿಸಲಾಗಿದೆ. ಘಟನೆಯಲ್ಲಿ ನಾಲ್ಕಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಶಾಲೆಗೆ ಸಮೀಪದಲ್ಲೇ ಇರುವ ಅಲ್ಪಸಂಖ್ಯಾತ ಶಿಯಾ ಹಜಾರಾ ಸಮುದಾಯದವರನ್ನು ಗುರಿಯಾಗಿಸಿ ಸುನ್ನಿ ಉಗ್ರರ ಗುಂಪು ಈ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಒಟ್ಟು ಮೂರು ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 4 ಮಂದಿ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ. 14 ಮಂದಿ ಗಾಯಗೊಂಡಿರುವುದಾಗಿ ಅಫ್ಗಾನ್‌ನ ಭದ್ರತಾ ಮತ್ತು ಆರೋಗ್ಯ ಅಧಿಕಾರಿಗಳಿಂದ ತಿಳಿದು ಬಂದಿದೆ.

ದಾಳಿಯ ಹೊಣೆ ಬಗ್ಗೆ ಯಾವುದೇ ಸಂಘಟನೆ ಘೋಷಿಸಿಕೊಂಡಿಲ್ಲ. ಕಳೆದ ವರ್ಷ ವಿದೇಶದ ಸೇನಾ ಪಡೆಗಳು ದೇಶ ತೊರೆದ ಬೆನ್ನಲ್ಲೇ ಆಗಸ್ಟ್‌ನಿಂದ ತಾಲಿಬಾನ್‌ ಅಫ್ಗಾನಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಗುಂಪುಗಳು ಹಲವು ಕಡೆ ದಾಳಿ ಮುಂದುವರಿಸಿವೆ.

Share Post