ಜನವಸತಿ ಪ್ರದೇಶದಲ್ಲಿ ವಿಷಾನಿಲ ಸೋರಿಕೆ; 16 ಮಂದಿ ದುರ್ಮರಣ
ಕೇಪ್ ಟೌನ್; ವಿಷಾನಿಲ ಸೋರಿಕೆಯಿಂದಾಗಿ ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್ ಬಳಿಕ ಬೋಕ್ಸ್‌ಬರ್ಗ್ ಪ್ರದೇಶದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಬೋಕ್ಸ್‌ಬರ್ಗ್‌ನಾದ್ಯಂತ ಮೃತದೇಹಗಳು ಚದುರಿದ ಸ್ಥಿತಿಯಲ್ಲಿ ಸಿಕ್ಕಿದೆ. ಅಕ್ರಮ ಗಣಿಗಾರಿಕೆ ಪ್ರದೇಶದಿಂದ ವಿಷಾನಿಲ ಸೋರಿಕೆಯಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತ 16 ಮಂದಿಯಲ್ಲಿ 1 ವರ್ಷದ ಮಗು ಕೂಡಾ ಸೇರಿದೆ. ಬೋಕ್ಸ್‌ಬರ್ಗ್ ಪ್ರದೇಶದಲ್ಲಿ ಅಲ್ಲಲ್ಲಿ ಮೃತದೇಹಗಳು ಬಿದ್ದಿವೆ. ವಿಷಾನಿಲ ಸೋರಿಕೆಯಿಂದ ಜನರು ಉಸಿರುಗಟ್ಟಿದ್ದು, ಜೀವ ಉಳಿಸಿಕೊಳ್ಳಲು ಮನೆಗಳಿಂದ ಹೊರಬಂದಿದ್ದಾರೆ. ರಸ್ತೆಗಳಲ್ಲಿ ಹೋಗುತ್ತಿದ್ದಾಗ, ಉಸಿರಾಟ ನಿಂತಿದೆ. ಪೊಲೀಸರು ಘಟನೆ ಯಾಕಾಯ್ತು, ಇದಕ್ಕೆ ಕಾರಣ ಯಾರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.