Districts

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿತು ಭೂಮಿ; 3.4 ತೀವ್ರತೆ ದಾಖಲು!

ವಿಜಯಪುರ; ವಿಜಯಪುರ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಭೂಮಿ ಕಂಪಿಸಿತ್ತು. ಭಾರೀ ಶಬ್ದದೊಂದಿಗೆ ವಿಜಯಪುರ ಜಿಲ್ಲೆಯ ಹಲವೆಡೆ ಭೂಮಿ ನಡುಗಿತ್ತು. ಇದೀಗ ಮತ್ತೆ ಭೂಮಿ ಕಂಪಿಸಿದ್ದು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕಳೆದ ಮಧ್ಯರಾತ್ರಿ 1.38ರ ಸಮಯದಲ್ಲಿ ವಿಜಯಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ನಡುಗಿದೆ.

ವಿಜಯಪುರ ತಾಲ್ಲೂಕಿನ ಐನಾಪುರ, ಬಸವನಬಾಗೇವಾಡಿ ಬಳಿಯ ಮನಗೂಳಿ ಸುತ್ತಮುತ್ತಲ ಪ್ರದೇಶಗಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ರಾತ್ರಿ ಎಲ್ಲರೂ ಮಲಗಿದ್ದಾಗ ಭೂಮಿ ನಡುಗಿದ್ದು, ಜನರು ಭಯದಿಂದ ಹೊರಗಡೆ ಬಂದಿದ್ದಾರೆ. ರಾತ್ರಿಯಿಡೀ ಹೊರಗೆ ಕುಳಿತಿದ್ದದಾರೆ. ರಿಕ್ಟರ್‌ ಮಾಪಕದಲ್ಲಿ 3.4 ತೀವ್ರ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ತಿರದಲ್ಲಿ ಆಲಮಟ್ಟಿ ಜಲಾಶಯವಿದೆ. ಈ ಕಾರಣದಿಂದ ಸಣ್ಣಪುಟ್ಟ ಕಂಪನಗಳು ಸಾಮಾನ್ಯವಾಗಿರುತ್ತವೆ. ಇದರಿಂದ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಭೂಕಂಪನ ತಜ್ಞರು ತಿಳಿಸಿದ್ದಾರೆ.

Share Post