CrimeDistricts

ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ; ವಿರೋಧಿಸಿದ್ದಕ್ಕೆ ಕೊಲೆ!

ದಕ್ಷಿಣ ಕನ್ನಡ; ಮನೆಯಲ್ಲಿ ಆಸರೆ ಕೊಟ್ಟ ಚಿಕ್ಕಮ್ಮನ ಮೇಲೇ ಬಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.. ಇದಾನ್ನು ವಿರೋಧಿಸಿದ್ದಕ್ಕೆ ಆ ಬಾಲಕ ಆಕೆಯನ್ನು ಕೊಲೆ ಮಾಡಿದ್ದಾನೆ..

  ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದೆ.. ಹೇಮಾವತಿ ಕೊಲೆಯಾದ ಮಹಿಳೆಯಾಗಿದ್ದಾಳೆ.. Sslc ಓದುತ್ತಿದ್ದ ಅಕ್ಕನ ಮಗನನ್ನು ಹೇಮಾವತಿ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಳು.

  ಎಂದಿನಂತೆ ಚಿಕ್ಕಮ್ಮ ರಾತ್ರಿ ಊಟದ ನಂತರ ತನ್ನ ಕೊನೆಯಲ್ಲಿ ಮಲಗಿದ್ದಳು. ಮಧ್ಯಾರಾತ್ರಿ ಎದ್ದು ಬಂದ ಅಕ್ಕನ ಮಗ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಚಿಕ್ಕಮ್ಮ ಕಪಾಳಕ್ಕೆ ಹೊಡೆದು ಬುದ್ಧಿ ಹೇಳಿ ಮಲಗಿದ್ದಾಳೆ..

  ಬೆಳಗ್ಗೆ ಎಲ್ಲರಿಗೂ ಹೇಳಿ ಮಾನ ಕಳೆಯುತ್ತಾಳೆ ಎಂದುಕೊಂಡ ಬಾಲಕ ಮತ್ತೆ ಆಕೆ ರೂಮ್ಗೆ ಹೋಗಿ ಕಟ್ಟು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಏನು ಗೊತ್ತಿಲ್ಲದವನಂತೆ ಮಲಗಿದ್ದಾನೆ.. ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ.

 

Share Post