International

ಟೆಕ್ಸಾಸ್‌ನಲ್ಲಿ ಮೀನಿನ ಮಳೆ:ವಿಡಿಯೋ ವೈರಲ್‌

ಅಮೆರಿಕಾ: ಆಲಿಕಲ್ಲು ಮಳೆ, ಬೆಂಕಿ ಮಳೆಯನ್ನು ಕೇಳಿದ್ದೇವೆ ಆದ್ರೆ ಮಳೆ ಜೊತೆ ಪ್ರಾಣಿಗಳು ಆಕಾಶದಿಂದ ಕೆಳಗೆ ಬೀಳುವುದನ್ನು ನೋಡಿದ್ದೀರಾ..? ಇದು ಆಶ್ಚರ್ಯ ಅನಿಸಿದ್ರು ನಿಜ ಅಮೆರಿಕಾದ ಟೆಕ್ಸಾಸ್‌ನಲ್ಲಿ ಮೀನಿ ಮಳೆ ಸುರಿದಿದೆ. ಈ ವಿಚಾರವನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಸಿಎನ್‌ಬಿಸಿ ವರದಿ ಮಾಡಿದ್ದು, 4ರಿಂದ 5 ಇಂಚಿನ ಬಿಳಿ ಬಣ್ಣದ ಮೀನುಗಳು ದಾರಿಯ ಮಧ್ಯೆ ಅಲ್ಲಲ್ಲಿ ಬಿದ್ದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್‌ ಆಗಿ ಆಶ್ಚರ್ಯಕ್ಕೀಡಾಗಿದೆ. ನ್ಯಾಷನಲ್‌ ಜಿಯೋಗ್ರಫಿ ತಜ್ಞರ ಪ್ರಕಾರ ಪ್ರವಾಹದ ವೇಳೆ ಸಣ್ಣ ಪ್ರಾಣಿಗಳು ಮುಳುಗಿ ಹೋಗುತ್ತವೆ ಹಾಗೆ ಬಲವಾದ ಗಾಳಿ ಬೀಸಿ ಮಳೆ ಬಂದಾಗ ಭೂಮಿಯಲ್ಲಿ ಹುದುಗಿರುವ ಜೀವಿಗಳು ಮೇಲೆ ಬಂದು ಮಳೆಯಂತೆ ಬೀಳುತ್ತವೆ ಎಂದು ತಿಳಿಸಿದ್ದಾರೆ.

ಇದು ಈಗ ಅಕ್ಷರಶಃ ನಿಜವಾಗಿದೆ. ಟೆಕ್ಸಾಸ್‌ನಲ್ಲಿ ಬಿದ್ದಿರುವ ಮೀನಿನ ಮಳೆಯನ್ನು ಸ್ಥಳೀಯರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅಮೆರಿಕಾದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲೇನಲ್ಲ ಅಂತಾರೆ ಅಲ್ಲಿನ ಜನ. 2017ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಪ್ರಾಥಮಿಕ ಶಾಲೆ ಮೇಲೆ ನೂರಾರು ಮೀನುಗಳು ಮಳೆಯಂತೆ ಬಿದ್ದ ಘಟನೆ ವರದಿಯಾಗಿತ್ತು. ಅಲ್ಲದೆ ಕಪ್ಪೆಗಳ ಮಳೆ ಬಿದ್ದಿದ್ದರ ಬಗ್ಗೆಯೂ ಮಾಹಿತಿಯಿದೆ. ಇದೀಗ ಮೀನಿನ ಮಳೆ ಟೆಕ್ಸಾಸ್​ ಜನತೆಯನ್ನು ಅಚ್ಚರಿಗೊಳಿಸಿದೆ.

Share Post