International

3 ತಿಂಗಳಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದ ಪಾಕ್‌ ಚುನಾವಣಾ ಆಯೋಗ

ಇಸ್ಲಾಮಾಬಾದ್: 3 ತಿಂಗಳಿನಲ್ಲಿ ಸಂಸತ್‌ ಚುನಾವಣೆ ನಡೆಸಲು ಸಾಧ್ಯನೇ ಇಲ್ಲ ಎಂದು ಪಾಕಿಸ್ತಾನದ ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಅವಿಶ್ವಾಸ ನಿರ್ಣಯವನ್ನು ಪಾಕಿಸ್ತಾನದ ಡೆಪ್ಯೂಟಿ ಸ್ಪೀಕರ್ ತಿರಸ್ಕರಿಸಿದ ಬಳಿಕ ಅಧ್ಯಕ್ಷರ ಮೂಲಕ ಸಂಸತ್ತನ್ನು ವಿಸರ್ಜಿಸಿ, ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಪ್ರಧಾನಿ ಇಮ್ರಾನ್ ಖಾನ್ ಆದೇಶ ಮಾಡಿಸಿದ್ದರು.ನ ಆದ್ರೆ ಇದು ಅಸಾಧ್ಯ ಎಂದು ಪಾಕಿಸ್ತಾನ ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಇತ್ತೀಚಿನ ಕ್ಷೇತ್ರಗಳ ಪುನರ್‌ ವಿಂಗಡಣೆ ಹಿನ್ನೆಲೆಯಲ್ಲಿ, ಅದರಲ್ಲೂ ಖೈಬರ್ ಪಖ್ತುಂಖ್ವಾದಲ್ಲಿ 26ನೇ ತಿದ್ದುಪಡಿ ಬಳಿಕ ಸ್ಥಾನಗಳು ಹೆಚ್ಚಾಗಿದ್ದು, ಜಿಲ್ಲಾ ಮತ್ತು ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಪ್ರಮುಖ ಸವಾಲಾಗಿದೆ. ಸಾರ್ವತ್ರಿಕ ಚುನಾವಣೆಯ ತಯಾರಿಗೆ ಕನಿಷ್ಠ ಆರು ತಿಂಗಳು ಬೇಕಾಗುತ್ತವೆ’ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಾನ್ ಸುದ್ದಿ ಪತ್ರಿಕೆ ವರದಿ ಮಾಡಿದೆ. ಚುನಾವಣಾ ಸಾಮಗ್ರಿ ಹೊಂದಿಸುವಿಕೆ, ಮತಪತ್ರ ತಯಾರಿ, ಚುನಾವಣಾ ಸಿಬ್ಬಂದಿ ತರಬೇತಿ ಮುಂತಾದವುಗಳು ಸವಾಲಿನ ಕೆಲಸಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

Share Post