Bengaluru

ಟೌನ್‌ ಹಾಲ್‌ ನಿಂದ ಫ್ರೀಡಂಪಾರ್ಕ್‌ ವರೆಗೆ ಜಾಥಾ

ಬೆಂಗಳೂರು: ರಾಜ್ಯದಲ್ಲಿ ಎಂಇಎಸ್‌ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಯ ಹೋರಾಟಗಾರರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್‌ ಕರೆ ನೀಡಲಾಗಿತ್ತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಸಂಧಾನದ ನಂತರ ಕನ್ನಡಪರ ಸಂಘಟನೆಯ ಹೋರಾಟಗಾರರ ಬಂದ್‌ ಅನ್ನು ವಾಪಸ್‌ ಪಡೆಯಲಾಗಿತ್ತು. ಆದರೂ ಕನ್ನಡಪರ ಸಂಘಟನೆ ಹೋರಾಟಗಾರರು ಬೆಂಗಳೂರಿನ ಟೌನ್‌ ಹಾಲ್‌ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ಕಾಲ್ನಡಿಗೆ ಜಾಥಾ ನಿರ್ಧರಿಸಿದ್ದು, ಟೌನ್‌ ಹಾಲ್‌ ನಿಂದ ಫ್ರೀಡಂಪಾರ್ಕ್‌ ವರಗೆ ಜಾಥಾ ಮಾಡಲಿದ್ದಾರೆ. ಈ ವೇಳೆ ಕನ್ನಡಪರ ಸಂಘಟನೆ ಕಾರ್ಯತರ್ತರು ಎಂಇಎಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಟೌನ್‌ ಹಾಲ್‌ ಬಳಿ ಸುಮಾರು ೨೦೦ಕ್ಕೂ ಪೊಲೀಸ್‌ ನಿಯೋಜಿನೆ ಮಾಡಿದ್ದಾರೆ.
ಈ ವೇಳೆ ಕನ್ನಡಪರ ಸಂಘಟನೆ ಹೋರಾಟಗಾರ ವಾಟಾಳ್‌ ನಾಗರಾಜು ಮಾತನಾಡಿ, ನಾವು ಬಂದ್‌ ರದ್ದು ಮಾಡಿಲ್ಲ, ಮುಂದೂಡಿದ್ದೇವೆ. ನನಗೆ ಸಾಕಷ್ಟು ಒತ್ತಡ ಹೇರಿದರು. ಹೀಗಾಗಿ ಬಂದ್‌ ಮುಂದೂಡಿದ್ದೇವೆ ಅಷ್ಟೇ ಎಂದರು.

Share Post