CrimeInternational

ಅಪಹರಣವಾಗಿದ್ದ ಭಾರತೀಯ ಮೂಲದ ನಾಲ್ವರ ಕೊಲೆ..!

ಕ್ಯಾಲಿಪೋರ್ನಿಯಾ; ಅಮೆರಿಕದ ಕ್ಯಾಲಿಫೋರ್ನಿಯಾದಿಂದ ನಿನ್ನೆ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರನ್ನು ಅಪಹರಿಸಲಾಗಿತ್ತು. ಇದೀಗ ನಾಲ್ವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪಂಜಾಬ್ ಮೂಲದ ದಂಪತಿ ಮತ್ತು ಅವರ ಮಗು ಹಾಗೂ ಕುಟುಂಬದ ಮತ್ತೋರ್ವ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿತ್ತು.

      ಜಸ್ ಪ್ರೀತ್ ಸಿಂಗ್(36), ಅವರ ಪತ್ನಿ ಜಸ್ಲೀನ್ ಕೌರ್(27) ಹಾಗೂ ಅವರ 8 ತಿಂಗಳ ಮಗು ಆರುಹಿ ಧೇರಿ ಮತ್ತು ಮಗುವಿನ ಚಿಕ್ಕಪ್ಪ ಅಮನ್ ದೀಪ್ ಸಿಂಗ್(39) ಕೊಲೆಯಾದವರು. ಸೋಮವಾರ ಸೌತ್ ಹೈವೇಯ 800ನೇ ಬ್ಲಾಕ್​​ನಲ್ಲಿ ವಹಿವಾಟು ನಡೆಸುವಾಗ ಶಸ್ತ್ರಾಸ್ತ್ರ ತೋರಿಸಿ ನಾಲ್ವರನ್ನು ಅಪಹರಿಸಲಾಗಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆದ್ರೆ ನಾಲ್ವರು ಕೊಲೆಯಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Share Post