BengaluruPolitics

ಹಾಲಿನ ದರ ಏರಿಕೆ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್‌; ಸಿಎಂ ಸಿದ್ದರಾಮಯ್ಯ

ಬೆಂಗಳೂರು; ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ 2 ರೂಪಾಯಿ ಏರಿಕೆ ಮಾಡಲಾಗಿದೆ.. ಇಂದು ಸುದ್ದಿಗೋಷ್ಠಿ ನಡೆಸಿದ ಕೆಎಂಎಫ್‌ ಅಧ್ಯಕ್ಷ ಈ ಮಾಹಿತಿ ನೀಡಿದ್ದಾರೆ.. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.. ಹಾಲಿನ ದರವನ್ನು ಸರ್ಕಾರ ಮಾಡೋದಿಲ್ಲ.. ಕೆಎಂಎಫ್‌ ಮಾಡಿದೆ.. ಆದರೂ ಕೂಡಾ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ಹೇಳಿದ್ದಾರೆ..

ಈ ಮೊದಲು ಹಾಲಿನ ಒಂದು ಲೀಟರ್‌ ಪಾಕೆಟ್‌ನಲ್ಲಿ 1000ML ಇರುತ್ತಿತ್ತು.. ಆದ್ರೆ ಈಗ ಅದನ್ನು 1050MLಗೆ ಏರಿಕೆ ಮಾಡಿದ್ದಾರೆ.. ಅದಕ್ಕಾಗಿ 2 ರೂಪಾಯಿ ಜಾಸ್ತಿ ಮಾಡಿದ್ದಾರೆ.. ನಾಳೆಯಿಂದಲೇ ಹೊಸ ದರ ಜಾರಿಯಾಗುತ್ತೆ.. ಮೊನ್ನೆಯಷ್ಟೇ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮಾಡಲಾಗಿತ್ತು..  ಈಗ ಹಾಲಿನ ದರ ಏರಿಕೆ ಮಾಡಿರುವುದರಿಂದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಈ ಬೆನ್ನಲ್ಲೇ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರ ದರ ಏರಿಕೆ ಮಾಡಿಲ್ಲ.. ಕೆಎಂಎಫ್‌ ಮಾಡಿದೆ.. ಬೇರೆ ರಾಜ್ಯಗಳಲ್ಲಿ ದರ ನೋಡಿಕೊಂಡು ಏರಿಕೆ ಮಾಡಲಾಗುತ್ತದೆ.. ಬೇರೆ ರಾಜ್ಯಗಳಲ್ಲಿ ನಮಗಿಂತ ಇನ್ನೂ ಹೆಚ್ಚಿನ ದರ ಇದೆ ಎಂದು ಅವರು ಸಮಜಾಯಿಷಿ ಕೊಟ್ಟಿದ್ದಾರೆ..

 

Share Post