Cinema

ನಾಳೆಯಿಂದ ಮೈಸೂರಿನಲ್ಲಿ ಸಿನಿಮಾ ನೋಡೋಕೆ ಆಗಲ್ಲ..!

ಮೈಸೂರು: ವೀಕೆಂಡ್‌ ಕರ್ಫ್ಯೂ ಹಾಗೂ ಶೇ.50ರಷ್ಟು ಪ್ರೇಕ್ಷಕರಿಗಷ್ಟೇ ಅವಕಾಶ ನೀಡಿರುವುದರಿಂದ ಥಿಯೇಟರ್‌ ಮಾಲೀಕರಿಗೆ ನಷ್ಟವಾಗುತ್ತಿದೆ. ಜೊತೆಗೆ ಹೊಸ ಸಿನಿಮಾಗಳೂ ರಿಲೀಸ್‌ ಆಗುತ್ತಿಲ್ಲ. ಇದ್ರಿಂದಾಗಿ ಜನ ಕೂಡಾ ಥಿಯೇಟರ್‌ಗಳತ್ತ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಯಾವುದೇ ಚಿತ್ರ ಪ್ರದರ್ಶನ ಮಾಡದಿರಲು ಮೈಸೂರು ಥಿಯೇಟರ್‌ ಮಾಲೀಕರು ತೀರ್ಮಾನಿಸಿದ್ದಾರೆ.

ವೀಕೆಂಡ್‌ ಕರ್ಫ್ಯೂ ಇರುವುದರಿಂದ ಶನಿವಾರ ಹಾಗೂ ಭಾನುವಾರ ಚಿತ್ರಪ್ರದರ್ಶನ ಇರುವುದಿಲ್ಲ. ಇನ್ನು ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದ್ರಿಂದಾಗಿ ಥಿಯೇಟರ್‌ ಮಾಲೀಕರಿಗೆ ನಷ್ಟವಾಗುತ್ತಿದೆ. ಮೊದಲ ಲಾಕ್‌ಡೌನ್‌ ಸಮಯದಿಂದ ಥಿಯೇಟರ್‌ ಮಾಲೀಕರಿಗೆ ಭಾರಿ ನಷ್ಟವಾಗಿದೆ. ಹೀಗಾಗಿ ಹಲವು ಥಿಯೇಟರ್‌ಗಳನ್ನು ಪರ್ಮನೆಂಟಾಗಿ ಕ್ಲೋಸ್‌ ಮಾಡಲಾಗಿದೆ. ಇರುವ ಥಿಯೇಟರ್‌ಗಳಿಗೂ ಜನ ಬರುತ್ತಿಲ್ಲ. ಹೀಗಾಗಿ, ಥಿಯೇಟರ್‌ಗಳಲ್ಲಿ ತಾತ್ಕಾಲಿಕವಾಗಿ ಪ್ರದರ್ಶನ ನಿಲ್ಲಿಸಲು ಮಾಲೀಕರು ತೀರ್ಮಾನಿಸಿದ್ದಾರೆ.

Share Post