HistoryPolitics

ಹೆಲಿಕಾಪ್ಟರ್ ನಲ್ಲಿ ಕಾಲು ಜಾರಿ‌ ಬಿದ್ದ ಮಮತಾ ಬ್ಯಾನರ್ಜಿ

ದುರ್ಗಾಪುರ; ಹೆಲಿಕಾಪ್ಟರ್ ನಲ್ಲಿ ಕೂರುವಾಗ ಪಶ್ಚಿಮ‌ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾಲು ಜಾರಿ ಬಿದ್ದಿರುವ ಘಟನೆ ನಡೆದಿದೆ.. ಪಶ್ಚಿಮ ಬರ್ಧಮಾನ್ ನ ದುರ್ಗಾಪುರದಲ್ಲಿ ಈ ಘಟನೆ ನಡೆದಿದೆ..

    ದುರ್ಗಾಪುರ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ಹತ್ತಿ ಕುಳಿತುಕೊಳ್ಳುವಾಗ ಕಾಲು‌ಜಾರಿ‌ಬಿದ್ದರು.. ಆಗ ರಕ್ಷಣಾ ಸಿಬ್ಬಂದಿ ಅವರನ್ನು ಹಿಡಿದುಕೊಂಡಿದ್ದಾರೆ.. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

  ಅನಂತರ ಸಿಎಂ ಮಮತಾ ಬ್ಯಾನರ್ಜಿಯವರು ಅಸನ್ಸೋಲ್ ಗೆ ಪ್ರಯಾಣ ಬೆಳೆಸಿದ್ದಾರೆ..

 

Share Post