ಚಿಕನ್ ಶವರ್ಮಾ ತಿಂದು ಯುವಕ ಸಾವು; ಐದು ಮಂದಿ ಅಸ್ವಸ್ಥ!
ಮುಂಬೈ; ಚಿಕನ್ ಶವರ್ಮಾ ತಿಂದು ಜೀವ ಕಳೆದುಕೊಂಡು ಮತ್ತೊಂದು ಘಟನೆ ನಡೆದಿದೆ.. ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ 14 ವರ್ಷದ ಬಾಲಕನೊಬ್ಬ ಶವರ್ಮಾ ತಿಂದು ಸಾವನ್ನಪ್ಪಿದ್ದ.. ಇದಾದ ಕೆಲ ದಿನಗಳಲ್ಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಘಟನೆ ನಡೆದಿದೆ.. ಮನ್‌ಖುರ್ದ್ ನಗರದಲ್ಲಿ 19 ವರ್ಷದ ಯುವಕ ಹೋಟೆಲ್ ಒಂದರಲ್ಲಿ ಚಿಕನ್ ಶವರ್ಮಾ ಸೇವಿಸಿದ್ದಾನೆ.. ಕೆಲ ಹೊತ್ತಿನಲ್ಲೇ ಆತ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ..
ಇದೇ ಹೋಟೆಲ್‌ನಲ್ಲಿ ಶವರ್ಮಾ ಸೇವಿಸಿದ ಐದು ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.. ಟ್ರಾಂಬೆ ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತ ವ್ಯಕ್ತಿಯನ್ನು ಪ್ರಥಮೇಶ್ ಭೋಕ್ಸೆ ಎಂದು ಗುರುತಿಸಲಾಗಿದೆ..