CrimeNational

ಅತ್ತೆ, ಮಕ್ಕಳನ್ನು ಕೊಂದ ಪತ್ನಿ!; ಹೆಂಡತಿಯ ಕತ್ತು ಸೀಳಿದ ಪತಿ!

ಪಾಟ್ನಾ(Patna); ಮಹಿಳಾ ಪೊಲೀಸ್‌ ಪೇದೆಯೊಬ್ಬರು ಇನ್ನಿಬ್ಬರು ಮಕ್ಕಳು ಹಾಗೂ ಅತ್ತೆಯನ್ನು ಕೊಂದಿದ್ದಾಳೆ.. ಈ ವಿಚಾರ ತಿಳಿಯುತ್ತಿದ್ದಂತೆ ಪತಿ ಮಹಿಳಾ ಪೊಲೀಸ್‌ ಪೇದೆಯನ್ನು ಹತ್ಯೆ ಮಾಡಿದ್ದಾನೆ.. ಅನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಇದರಿಂದಾಗಿ ಒಂದೇ ಕುಟುಂಬದಲ್ಲಿ ಐದು ಮಂದಿ ಸಾವನ್ನಪ್ಪಿದಂತಾಗಿದೆ.. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘೋರ ಕೃತ್ಯ ಎಸಗಲಾಗಿದೆ.. ಬಿಹಾರದ ಭಾಗಲ್ಪುರದ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಬೆಂಗಳೂರಲ್ಲಿ ಮಿಸ್ಡ್‌ಕಾಲ್‌ ಮಾಯಾಂಗನೆ!; ಯಾಮಾರಿದ್ರೆ ಮುಗೀತು!

ಮಹಿಳಾ ಪೊಲೀಸ್‌ ಪೇದೆಯಾಗಿದ್ದ ನೀತು ಕುಮಾರಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳು ಹಾಗೂ ಅತ್ತೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.. ಈ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಪತಿ ನೀತು ಕುಮಾರಿಯ ಕತ್ತು ಸೀಳಿದ್ದಾನೆ. ಅನಂತರ ತನ್ನ ಕೊಠಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಮೃತರನ್ನು ನೀತು ಕುಮಾರಿ, ಪಂಕಜ್‌, ಆಶಾದೇವಿ, ನಾಲ್ಕೂವರೆ ವರ್ಷದ ಶಿವಾಂಶ್‌, ಮೂರೂವರೆ ವರ್ಷದ ಶ್ರೇಯಾ ಎಂದು ಗುರುತಿಸಲಾಗಿದೆ..

ಇದನ್ನೂ ಓದಿ; ವಯನಾಡು ಸಂತ್ರಸ್ತರ ನೆರವಿಗೆ ನಾವಿದ್ದೇವೆ; ಪ್ರಧಾನಿ ಮೋದಿ

ಪತಿ ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ಎಲ್ಲವನ್ನೂ ವಿವರವಾಗಿ ಬರೆದಿದ್ದಾನೆ.. ಬೆಳಗ್ಗೆ ಹಾಲಿನ ವ್ಯಾಪಾರಿ ಬಾಗಿಲು ಬಡಿದರೂ ಬಾಗಿಲು ತೆಗೆದಿಲ್ಲ.. ಅನುಮಾನದಿಂದ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾನೆ.. ಅದು ಪೊಲೀಸ್‌ ಕ್ವಾರ್ಟಸ್‌ ಆಗಿರುವುದರಿಂದ ಅಕ್ಕ ಪಕ್ಕದಲ್ಲಿ ವಾಸವಿದ್ದ ಪೊಲೀಸರು ಬಾಗಿಲು ಮುರಿದು ಒಳಹೋಗಿ ನೋಡಿದಾಗ ದುರಂತ ಬೆಳಕಿಗೆ ಬಂದಿದೆ..

ಇದನ್ನೂ ಓದಿ; ಪ್ರೀತಿಗೆ ಒಪ್ಪದ ಪೋಷಕರು; ಯುವಕ ಆತ್ಮಹತ್ಯೆ, ಯುವತಿ ಆಸ್ಪತ್ರೆಗೆ!

Share Post