HealthInternational

ಕೋವಿಡ್‌ ಕೊನೆಗಾಣಿಸಲು ಕರೆ ಕೊಟ್ಟ WHO ಮುಖ್ಯಸ್ಥ

ಜಿನೇವಾ : ಓಮಿಕ್ರಾನ್‌ ಸೋಂಕು ಜನರಲ್ಲಿ ಭಯದ ವಾತಾವರಣ ಸೃಷ್ಠಿ ಮಾಡುತ್ತಿದೆ. ಈ ರೂಪಾಂತರಿ ತಳಿ ಬಹಳ ಬೇಗ ಹರಡುವುದು ಎಂದು  WHO ಹೇಳಿತ್ತು. ನಾವು ಕೊರೊನಾ ಸಾಂಕ್ರಾಮಿಕವನ್ನು ೨೦೨೨ರ ಅಂತ್ಯದೊಳಗೆ ಕೊನೆಗಾಣಿಸಬೇಕು ಎಂದು WHO ಮುಖ್ಯಸ್ಥ ಟೆಡ್ರೋಸ್‌ ಅಡಾನೊಮ್‌ ಗೆಬ್ರೆಯೆಸಸ್‌ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಟೆಡ್ರೋಸ್‌, “ಎರಡನೇ ಬಾರಿಗೆ ನಾವು ಕ್ರಿಸ್‌ಮಸ್‌ ಅನ್ನು ಕೋವಿಡ್‌ ಭಯದಲ್ಲೇ ಆಚರಿಸುವಂತೆ ಆಗಿದೆ. ಈ ಸಾಂಕ್ರಾಮಿಕವನ್ನು ಕೊನೆಗಾಣಿಸಲು ಎಲ್ಲಾ ದೇಶದ ಸರ್ಕಾರಗಳು ಒಂದುಗೂಡಿ ಕೆಲಸ ಮಾಡಬೇಕು. 2022ರಲ್ಲಿ ನಾವು ಸಂಪೂರ್ಣವಾಗಿ ಕೋವಿಡ್‌ಗೆ ಅಂತಿಮ ಹಾಡಬೇಕು ಎಂದು ತಿಳಿಸಿದ್ದಾರೆ.

ಮುಂದಿನ ವರ್ಷ ಕೊರೊನಾ ಕೊನೆಗಾಣಿಸಬೇಕಾದರೆ, ೨೦೨೨ರ ಮಧ್ಯಭಾಗದ ಹೊತ್ತಿಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ.೭೦ರಷ್ಟು ಜನರಿಗೆ ಲಸಿಕೆ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಓಮಿಕ್ರಾನ್‌ ತಡೆಗಟ್ಟಲು ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

Share Post