Bengaluru

ತರಕಾರಿ ಬೆಲೆ ಗಗನಕ್ಕೆ, ಖರೀದಾರರಿಗೆ ಫುಲ್‌ ಶಾಕ್

ಬೆಂಗಳೂರು: ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಫಸಲು ಬರುವುದಕ್ಕಿಂತ ಮೊದಲೇ ನೆಲಕಚ್ಚಿ ಹೋಗಿದೆ. ಹೀಗಾಗಿ ರೈತರು ಮುಂದೆ ಜೀವನ ಹೇಗೆ ಅಂತ ಚಿಂತಿಸುತ್ತಿದ್ದಾರೆ. ಈ ನಡುವೆ ತರಕಾರಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಖರೀದಿದಾರರು ಶಾಕ್ ಆಗಿದ್ದಾರೆ. ಮಾರುಕಟ್ಟೆಗೆ ಬರುವ ಖರೀದಿದಾರರು ತರಕಾರಿ ಬೆಲೆ ಕಂಡು ವಾಪಸ್ಸಾಗುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 15 ದಿನಗಳ ಕಾಲ ಸುರಿದ ನಿರಂತರ ಮಳೆಗೆ ತರಕಾರಿ ಹೊಲದಲ್ಲೇ ಕೊಳೆತು ಹೋಗಿವೆ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಬರುವ ಪ್ರಮಾಣ ಕಡಿಮೆಯಾಗಿದೆ.
ತರಕಾರಿಗೆ ಬೆಲೆ ಎಷ್ಟಿದೆ?
ಒಂದು ಕೆಜಿ ನವೀಲುಕೋಸು- 100 ರೂ.
ಬೀನ್ಸ್- 90 ರೂ.
ಮೂಲಂಗಿ- 80 ರೂ.
ಕ್ಯಾಪ್ಸಿಕಂ- 80 ರೂ.
ಕ್ಯಾರೆಟ್- 80 ರೂ.
ಬದನೆಕಾಯಿ- 80 ರೂ.
ಹೀರೆಕಾಯಿ- 80 ರೂ.
ಸೋರೆಕಾಯಿ- 80 ರೂ.
ಟೊಮ್ಯಾಟೋ- 120 ರೂ.
ಟೊಮ್ಯಾಟೋ ದರ ಕೇಳಿ ಗ್ರಾಹಕರು ಕಂಗಾಲಾಗಿದ್ದಾರೆ. ಹೀಗಾಗಿ ಟೊಮ್ಯಾಟೋ ದರ ಕೇಳಿದ ಖರೀದಿದಾರರು ಮಾರುಕಟ್ಟೆಯಿಂದ ವಾಪಸ್ಸಾಗುತ್ತಿದ್ದಾರೆ.
ಸುಮಾರು ಒಂದು ತಿಂಗಳಿನಿಂದ ಖರೀದಿದಾರರಿಗೆ ತರಕಾರಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಒಂದು ತಿಂಗಳ ಹಿಂದೆ ಇದ್ದ ದರ ಇಂದು ಇಲ್ಲ ಅಂತ ಖರೀದಿರಾರರು ಹೇಳುತ್ತಿದ್ದಾರೆ. ಅಕಾಲಿಕ ಮಳೆಯಿಂದ ಬೆಲೆ ಡಬಲ್ ಆಗಿದೆ. ಹೊಸದಾಗಿ ತರಕಾರಿ ಬೆಳೆ ರೈತರ ಕೈ ಸೇರುವವರೆಗೂ ರಾಜ್ಯದ ಜನರು ಇದೇ ಪರಿಸ್ಥಿತಿ ಎದುರಿಸಬೇಕು

Share Post