National

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ರಾ..?; ಸಿಕ್ಕಿಬಿದ್ದ ನಿವೃತ್ತ ಪೊಲೀಸ್‌ ಅಧಿಕಾರಿ

ಪಾಟ್ನಾ; ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.  ಜಾರ್ಖಂಡ್‌ ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ ಮಹಮದ್ ಜಲಾವುದ್ದೀನ್  ಹಾಗೂ ಆತನ ಪತ್ನಿ ಅಥರ್ ಪರ್ವೇಜ್ ಅವರೇ ಬಂಧಿತರು.

ಜುಲೈ 11ರಂದೇ ಇಬ್ಬರನ್ನೂ ಬಂಧಿಸಲಾಗಿದೆ. ಬಿಹಾರದ ನಯಾ ಟೋಲಾ ಪ್ರದೇಶದಲ್ಲಿ ಇಬ್ಬರೂ ಸೆರೆ ಸಿಕ್ಕಿದ್ದಾರೆ. ಬಂಧಿತರಿಂದ ಪಿಎಫ್‍ಐ ಕರಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.  ಜುಲೈ 12ರ ಪಾಟ್ನಾ ಪ್ರವಾಸದ ವೇಳೆ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಆರೋಪಿಗಳು ಜುಲೈ 6 ಮತ್ತು 7ರಂದು ಪೂರ್ವಭಾವಿ ಸಭೆಗಳನ್ನು ನಡೆಸಿದ್ದರು.

ಬಂಧಿತ ದಂಪತಿ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಿಂದ ದೇಶವಿರೋಧಿ ಅಭಿಯಾನ ನಡೆಸಲು ಹಣ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. 2001-02ರಲ್ಲಿ ಸಿಮಿ ಸಂಘಟನೆ ನಿಷೇಧದ ನಂತರ ಬಿಹಾರದಲ್ಲಿ ಹಲವಾರು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಪರ್ವೇಜ್ ಅವರ ಕಿರಿಯ ಸೋದರ ಜೈಲು ಪಾಲಾಗಿದ್ದನೆಂದು ತಿಳಿದುಬಂದಿದೆ.

Share Post