CrimeHealthNational

ಶವಾಗಾರದಲ್ಲಿ ಮೃತದೇಹಗಳನ್ನು ಕಚ್ಚಿ ತಿನ್ನುತ್ತಿವೆ ಇಲಿಗಳು..!

ಲಖನೌ; ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಮೃತದೇಹಗಳನ್ನೇ ತಿಂದು ಮುಗಿಸುತ್ತಿವೆ.. ಉತ್ತರ ಪ್ರದೇಶದ ದೇವಗಾಂವ್ ನ ಕೊತ್ವಾಲಿಯ ಚೇವಾರ ಗ್ರಾಮದಲ್ಲಿ ಆಟೋ ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ್ದರು.. ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇಡಲಾಗಿತ್ತು.. ಪೋಷಕರು ಶವಗಳನ್ನು ಪಡೆಯುವಾಗ ಅವುಗಳ ಸ್ಥಿತಿ ನೋಡಿ ಬೇಸ್ತು ಬಿದ್ದಿದ್ದಾರೆ..

   ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಶವಾಗಾರದಲ್ಲಿ ಇಡಲಾಗಿತ್ತು.. ಈ ವೇಳೆ ಇಲಿಗಳು ಶವಗಳ ಕಣ್ಣುಗಳು, ಬೆರಳುಗಳು, ದೇಹದ ಹಲವು ಭಾಗಗಳು ಕಚ್ಚಿ ತಿಂದಿವೆ.. ಆಸ್ಪತ್ರೆಯವರು ಬಟ್ಟೆ ಸುತ್ತಿ ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಿದ್ದರು..

  ಸಂಬಂಧಿಕರು ಮನೆಗೆ ಬಂದ ಮೇಲೆ ಬಟ್ಟೆ ಬಿಚ್ಚಿ ನೋಡಿದಾಗ ಹೌಹಾರಿದ್ದಾರೆ.. ದೇಹಗಳ ಸ್ಥಿತಿ ಕಂಡು ಮರುಗಿದ್ದಾರೆ.. ಆಕ್ರೋಶಗೊಂಡಿರುವ ಮೃತರ ಸಂಬಂಧಿಕರು ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ.. ಈ ಬಗ್ಗೆ ಸಿಎಂ ಗೆ ಪತ್ರ ಬರೆಯಲಾಗಿದೆ..

 

Share Post