Health

ನಿಮಗೆ ಈ 8 ಲಕ್ಷಣಗಳಿವೆಯೇ..?; ಹಾಗಾದರೆ ಕೂಡಲೇ ಪರೀಕ್ಷೆ ಮಾಡಿಸಿ

ನವದೆಹಲಿ: ದೇಶದಲ್ಲಿ ಒಮಿಕ್ರಾನ್‌ ಹಾಗೂ ಕೊರೊನಾ ಭೀತಿ ಹೆಚ್ಚಾಗುತ್ತಿದೆ. ಮತ್ತೆ ಲಾಕ್‌ಡೌನ್‌ ಮಾಡಬೇಕಾದ ಪರಿಸ್ಥಿತಿ ಬರಬಹುದೇನೋ ಎಂಬ ಆತಂಕ ಶುರುವಾಗಿದೆ. ದೇಶದಲ್ಲಿ ಕೊರೊನಾ ಹಾಗೂ ಒಮಿಕ್ರಾನ್‌ ಹರಡುವುದನ್ನು ತಡೆಗಟ್ಟಬೇಕಾದರೆ ಕೇವಲ ಸರ್ಕಾರಗಳು ಶ್ರಮ ವಹಿಸಿದರೆ ಸಾಕಾಗುವುದಿಲ್ಲ. ಜನರೂ ಕೂಡಾ ಸರ್ಕಾರಕ್ಕೆ ಸ್ಪ೦ದಿಸಬೇಕಿದೆ. ಕೊರೊನಾ ಹಾಗೂ ಒಮಿಕ್ರಾನ್‌ ಲಕ್ಷಣಗಳು ಕಂಡುಬಂದ ಕೂಡಲೇ ಸಾಮಾಜಿಕ ಅಂತರ ಕಾಪಾಡುವುದು, ಕೂಡಲೇ ಪರೀಕ್ಷೆ ಮಾಡಿಸುವುದು ಮಾಡಬೇಕಿದೆ.

ಅಮೆರಿಕ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಒಮಿಕ್ರಾನ್‌ ಕೇಸ್‌ಗಳು ಜಾಸ್ತಿಯಾಗಿವೆ. ಇಲ್ಲಿ ಒಮಿಕ್ರಾನ್‌ ಸೋಂಕಿಗೆ ಗುರಿಯಾದವರಿಗೆ ಪ್ರಮುಖವಾಗಿ ಎಂಟು ಲಕ್ಷಣಗಳು ಕಂಡುಬಂದಿವೆ. ಭಾರತದಲ್ಲೂ ಕೂಡಾ ಒಮಿಕ್ರಾನ್‌ ಸೋಂಕಿತರಿಗೆ ಇದೇ ಎಂಟು ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಈ ಕೆಳಗಿನ ಎಂಟು ಲಕ್ಷಣಗಳು ಕಂಡುಬಂದರೆ ಜನರು ನಿರ್ಲಕ್ಷ್ಯ ತೋರದೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ಈ ಕೆಳಗಿನ ಎಂಟು ಲಕ್ಷಣಗಳಲ್ಲಿ ಯಾವುದಾದರೊಂದು ಲಕ್ಷಣ ಕಂಡುಬಂದರೂ ಕೂಡಲೇ ಪರೀಕ್ಷೆ ಮಾಡಿಸಿದರೆ, ಸೋಂಕು ಹರಡುವುದನ್ನು ತಡೆಗಟ್ಟಲು ಅನುಕೂಲವಾಗುತ್ತದೆ.

ತಜ್ಞರು ಸೂಚಿಸಿರುವ ಎಂಟು ಲಕ್ಷಣಗಳು

೧. ಗಂಟಲು ಕಿರಿಕಿರಿ
೨. ಕೆಳ ಬೆನ್ನು ನೋವು
೩. ಮೂಗು ಸೋರುವುದು ಮತ್ತು ಕಟ್ಟುವುದು
೪. ವಿಪರೀತ ತಲೆನೋವು
೫. ಆಯಾಸ ಹೆಚ್ಚಾಗುವುದು
೬. ಹೆಚ್ಚಾಗಿ ಸೀನು ಬರುವುದು
೭. ರಾತ್ರಿ ವೇಳೆಯಲ್ಲಿ ಮೈಕೈ ಬೆವರುವುದು
೮. ದೇಹದ ಅಂಗಾಂಗಗಳಲ್ಲಿ ನೋವು ಕಾಣಿಸಿಕೊಳ್ಳುವುದು

Share Post