ರಾತ್ರಿ ಸುಖ ನಿದ್ರೆ ಬರಬೇಕೇ? ಹೀಗೆ ಮಾಡಿ
ಇತ್ತೀಚಿಗೆ ತೀವ್ರ ಒತ್ತಡದಿಂದ ಜನರಿಗೆ ನಿದ್ರೆ ಭಂಗವಾಗುತ್ತಿದೆ. ಪ್ರತಿಯೊಬ್ಬರು ಆರೋಗ್ಯಕರವಾಗಿರಲೂ ಆಹಾರದ ಜೊತೆಗೆ ನಿದ್ರೆಯೂ ಅಷ್ಟೇ ಮುಖ್ಯವಾಗಿದೆ.
ಸರಿಯಾಗಿ ನಿದ್ರೆ ಬರದೆ ಸಮಸ್ಯೆಯನ್ನು ಅನುಭವಿಸುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದ್ದಾರೆ. ಈ ಸಮಸ್ಯೆಗೆ ವಿವಿಧ ದೈಹಿಕ, ಮಾನಸಿಕ ಅಥವಾ ಪರಿಸರ ಅಂಶಗಳು ಕಾರಣವಾಗುತ್ತದೆ. ಕೆಲವು ಔಷಧಿಗಳು ದೇಹಕ್ಕೆ ಪರಿಹಾರ ಮತ್ತು ವಿಶ್ರಾಂತಿಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂಬುದು ನಿಜವಾಗಿದ್ದರೂ, ಔಷಧಿಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ನಿಮ್ಮ ನಿದ್ರೆಯ ಸಮಸ್ಯೆಗೆ ಆಹಾರ ಪರಿಹಾರ ನೀಡುತ್ತದೆ ಎಂಬುದು ಸತ್ಯ. ನಿದ್ರೆಯ ಸಮಸ್ಯೆಗೆ ಪರಿಹಾರ ಪಡೆಯಲು ಆಹಾರ ಮತ್ತು ಜೀವನಶೈಲಿಯ ನಿಯಂತ್ರಣದಂತಹ ಇತರ ಚಿಕಿತ್ಸಾ ವಿಧಾನಗಳನ್ನು ಸಹ ಅನುಸರಿಸಬೇಕು.
ಜೇನುತುಪ್ಪ:
ಸಾಮಾನ್ಯವಾಗಿ ಜೇನುತುಪ್ಪ ಎಷ್ಟು ಆರೋಗ್ಯಕರ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಇದನ್ನ ಸಕ್ಕರೆಯ ಬದಲಾಗಿ ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್, ಉರಿಯೂತದ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಮಲಗುವ ಮುನ್ನ ಈ ಸಿಹಿ ಜೇನನ್ನ ಸೇವನೆಯು ನಿದ್ರೆಯ ಸಮಸ್ಯೆ ನಿವಾರಿಸುತ್ತದೆ.
ಹಾಲು:
ಒಳ್ಳೆಯ ನಿದ್ರೆಗಾಗಿ ಜನರು ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಕುಡಿಯುವುದು ಬಹಳ ಉತ್ತಮ ಎನ್ನಲಾಗುತ್ತದೆ. ಹಾಲು ನಿಮ್ಮ ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಿ, ಒಳ್ಳೆಯ ನಿದ್ರೆ ಬರಲು ಕಾರಣವಾಗುತ್ತದೆ.
ನಟ್ಸ್ಗಳು:
ಚೆನ್ನಾಗಿ ನಿದ್ದೆ ಮಾಡಲು ನಿಮಗೆ ಈ ನಟ್ಸ್ಗಳು (Nuts) ಹೆಚ್ಚು ಸಹಾಯ ಮಾಡುತ್ತದೆ. ಬೆರಳೆಣಿಕೆಯಷ್ಟು ನಟ್ಸ್ಗಳನ್ನು ತಿನ್ನುವುದು ನಿಮ್ಮ ನಿದ್ರೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ.