HealthNational

ಮೆಟ್ರೋ ರೈಲಿನ ಬಾಗಿಲಿಗೆ ಸಿಲುಕಿದ ಸೀರೆ ಸೆರಗು; ಮಹಿಳೆ ದುರ್ಮರಣ!

ನವದೆಹಲಿ; ಮೆಟ್ರೋ ರೈಲಿನ ಬಾಗಿಲಿಗೆ ಸೀರೆ ಸೆರಗು ಸಿಕ್ಕಿಕೊಂಡಿದ್ದರಿಂದ ರೈಲು ಆ ಮಹಿಳೆಯನ್ನು ಎಳೆಯಲ್ಪಟ್ಟು ಆಕೆ ಕೆಳಗೆ ಬಿದ್ದಿ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ. ದೆಹಲಿಯ ಇಂದರ್‌ಲೋಕ್‌ ಮೆಟ್ರೋ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ.

ರೀನಾ ಎಂಬ ಮಹಿಳೆಯೇ ಮೆಟ್ರೋ ರೈಲಿಗೆ ಸಿಲುಕಿ ಸಾವನ್ನಪ್ಪಿದ ಮಹಿಳೆ. ಈ ಮಹಿಳೆ ಇಂದರ್‌ಲೋಕ್‌ ಮೆಟ್ರೋ ನಿಲ್ದಾಣದಿಂದ ರೈಲು ಬದಲಾವಣೆ ಮಾಡಬೇಕಿತ್ತು. ಈ ವೇಳೆ ಈ ದುರ್ಘಟನೆ ನಡೆದಿದೆ. ಅಂದಹಾಗೆ ಗುರುವಾರ ಈ ಘಟನೆ ನಡೆದಿತ್ತು. ಈ ವೇಳೆ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು.

ಆ ಮಹಿಳೆಯನ್ನು ಸಫ್ದರ್‌ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.

Share Post