ಕೊವಿಡ್ ನಂತರ ಮಕ್ಕಳು, ಗರ್ಭಿಣಿಯರಲ್ಲಿ ಮಧುಮೇಹ ಹೆಚ್ಚಳ
ನ್ಯೂಯಾರ್ಕ್; ಕೊವಿಡ್ ಸೋಂಕು ಕಾಣಿಸಿಕೊಂಡ ನಂತರ ಪ್ರಪಂಚದಾದ್ಯಂತ ಮಧಯಮೇಹಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಹೆಚ್ಚಿದೆ. ಅದ್ರಲ್ಲೂ ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಮಧುಮೇಹ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಟೈಪ್-೨ ಮಧುಮೇಹದಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಅಮೆರಿಕಾದ ಇಲಿನಾಯ್ಸ್‌ನಲ್ಲಿ ನಡೆದ ಎಂಡೋಕ್ರೈನ್ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಈ ಆಘಾತಕಾರಿ ವಿಷಯ ಬಯಲಾಗಿದೆ. ಕೊರೊನಾ ನಂತರ ಗರ್ಭಿಣಿಯರಿಗೆ ಹೆಚ್ಚು ಮಧುಮೇಹ ಆವರಿಸಿದೆ ಎಂದು ತಜ್ಞರು ಹೇಳಿದ್ದಾರೆ. ಓಹಿಯೋದ ಕೊಲಂಬಸ್‌ನಲ್ಲಿರುವ ನೇಷನ್‌ವೈಡ್ ಚಿಲ್ಡ್ರನ್ಸ್ ಆಸ್ಪತ್ರೆಯ ಸಂಶೋಧಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋವಿಡ್-19 ಬಂದ ಮೊದಲ ವರ್ಷದಲ್ಲಿ ಜನರು ಮನೆಯಲ್ಲೇ ಉಳಿದುಕೊಂಡಿದ್ದರು. ಇದರಿಂದಾಗಿ ಮಕ್ಕಳು ಹೆಚ್ಚು ಆಹಾರ ಸೇವಿಸಿದ್ದರಿಂದ ಟೈಪ್-೨ ಮಧುಮೇಹ ಮಕ್ಕಳಿಗೆ ಹೆಚ್ಚಾಗಿದೆ.
ಎರಡನೇ ಅಧ್ಯಯನ ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ತಂಡದ ವರದಿ ಪ್ರಕಾರ 14,663 ಗರ್ಭಧಾರಣೆಗಳಲ್ಲಿ ಮಧುಮೇಹ ಪತ್ತೆಯಾಗಿದೆ. ಅದರಲ್ಲಿ 6,890 ಮಹಿಳೆಯರು ಮೊದಲ ವರ್ಷದಲ್ಲಿ ಮತ್ತು 6,654 ಮಹಿಳೆಯರು ಎರಡನೇ ವರ್ಷದ ಕೊವಿಡ್‌ನಲ್ಲಿ ಮಧುಮೇಹಕ್ಕೆ ತುತ್ತಾಗಿದ್ದಾರೆ.