Bengaluru

ಶಕ್ತಿ ಯೋಜನೆ; 4-5 ದಿನಗಳ ಪ್ರವಾಸಕ್ಕೆ ಇಡೀ ಬಸ್‌ ರಿಸರ್ವ್‌ ಮಾಡಲು ಬಂದ ಅಜ್ಜಿ

ಬೆಂಗಳೂರು; ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರ ಶಕ್ತಿಯೋಜನೆ ಜಾರಿಗೆ ತಂದಾಗಿನಿಂದ ಬಸ್‌ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ. ಪ್ರವಾಸಕ್ಕೆ ಹೊರಡುವ ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ. ಹೀಗಿರುವಾಗಲೇ ಮಹಿಳೆಯೊಬ್ಬರು, ನಮ್ಮ ಕುಟುಂಬದ ಮಹಿಳೆಯರು ಹಾಗೂ ಮಹಿಳಾ ಸಂಘದ ಸದಸ್ಯರು ಸೇರಿ 48 ಮಂದಿ ಇದ್ದೇವೆ. ನಮಗೆ ಪ್ರವಾಸ ಹೋಗಲು ಒಂದು ಉಚಿತ ಬಸ್‌ ಕಳುಹಿಸಿಕೊಡಿ ಎಂದು ಕೇಳಿದ್ದಾರೆ.

ಮೆಜೆಸ್ಟಿಕ್‌ ಕೆಎಸ್‌ಆರ್‌ಟಿಸಿ ಕಚೇರಿಗೆ ಬಂದಿದ್ದ ಮಾಗಡಿ ರಸ್ತೆ ಬ್ಯಾಡರಹಳ್ಳಿಯ ನಿವಾಸಿ ಸುನಂದಾ ಎಂಬ ಅಜ್ಜಿ,  ಇಡೀ ಬಸ್‌ನ 48 ಸೀಟುಗಳನ್ನು ರಿಸರ್ವ್ ಮಾಡಬಹುದೇ ಎಂದು ವಿಚಾರಿಸಿದ್ದಾರೆ. ಜೊತೆಗೆ ಯಾವ ಯಾವ ಮಾರ್ಗಗಳಲ್ಲಿ ಎಷ್ಟು ಬಸ್‌ಗಳಿವೆ ಎಂಬುದರ ಬಗ್ಗೆ ಮಾಹಿತಿ ಪಡೆದು ಅದನ್ನು ಬರೆದುಕೊಂಡು ಹೋಗಿದ್ದಾರೆ.

ಅಜ್ಜಿಗೆ ಕುಟುಂಬಸ್ಥರು ಸೇರಿ ಒಟ್ಟು 20 ಮಂದಿ ಸ್ನೇಹಿತೆಯರಿದ್ದಾರೆ. ಇದರ ಜೊತೆಗೆ ಮಹಿಳಾ ಸಂಘದ 28 ಸದಸ್ಯರು ಸೇರಿ ಒಂದಿಡೀ ಬಸ್‌ನಲ್ಲಿ ಉಚಿತವಾಗಿ ಪ್ರವಾಸ ಹೊರಡುವುದು ಅಜ್ಜಿಯ ಪ್ಲ್ಯಾನ್‌. 4-5 ದಿನಗಳ ಪ್ರವಾಸ ಹೊರಡಲು ಸುನಂದಾ ಅವರು ಪ್ಲ್ಯಾನ್‌ ಮಾಡಿದ್ದಾರೆ. ಈ ಬಗ್ಗೆ ವಿಚಾರಿಸೋದಕ್ಕೆ ಆಕೆ ಬಂದಿದ್ದಳು.

ಮಹಿಳೆಯರಿಗೆ ಉಚಿತ ಇದೆ. ಜೊತೆಗೆ ದೂರದ ಊರುಗಳಿಗೆ ಹೋಗಲು ಸಾಮಾನ್ಯ ಬಸ್‌ನಲ್ಲಿ 20 ರೂಪಾಯಿ ನೀಡಿ ಸೀಟ್‌ ರಿಸರ್ವ್‌ ಮಾಡುವ ಅವಕಾಶವೂ ಇದೆ. ಆದ್ರೆ, ಸರ್ಕಾರ ಮಾಡಿರುವ ರೂಲ್ಸ್‌ ಇಡೀ ಬಸ್‌ನಲ್ಲಿ ಮಹಿಳೆಯರು ಹೋಗೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ, ಶೇಕಡಾ 50ರಷ್ಟು ಪುರುಷರಿಗೆ ಮೀಸಲಿರಿಸಬೇಕಿದೆ. ಹೀಗಾಗಿ, ಅರ್ಧ ಬಸ್‌ನಷ್ಟು ಮಹಿಳೆಯರು ಪ್ರವಾಸ ಹೋಗಲು ಪ್ಲ್ಯಾನ್‌ ಮಾಡುವ ಸಾಧ್ಯತೆ ಇದೆ.

 

Share Post