19ಕ್ಕೇರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ
ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ ಸುಧಾಕರ್ ಓಮಿಕ್ರಾನ್ ಸೋಂಕಿನ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ಪತ್ತೆಯಾಗಿದೆ, ಇದರಿಂದ ಸೋಂಕಿನ ಸಂಖ್ಯೆ ೧೯ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.
ಧಾರವಾಡದ 54 ವರ್ಷದ ವ್ಯಕ್ತಿ, ಭದ್ರಾವತಿಯ 20 ವರ್ಷದ ಯುವತಿ , ಉಡುಪಿಯ 82 ವರ್ಷದ ವೃದ್ಧ ಹಾಗೂ 73 ವರ್ಷದ ವೃದ್ಧೆಗೆ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಮಗಳೂರಿನ 19 ವರ್ಷದ ಯುವತಿಯಲ್ಲೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಎಲ್ಲಾ ರೋಗಿಗಳನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ರೋಗಿಗೆ ತೀವ್ರತರವಾದ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ. ಇನ್ನೊಂದೆಡೆ ರೋಗಿಗಳ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿದ್ದು, ಅವರನ್ನು ಕೂಡಾ ಕ್ವಾರಂಟೀನ್ ಮಾಡಲಾಗಿದ್ದು, ಅವರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
Five cases of Omicron have been confirmed on Dec 19th:
? Dharwad: 54 yr male
? Bhadravathi: 20 yr female
? Udupi: 82 yr male and 73 yr female
? Mangaluru: 19 yr female#Omicronindia #Covid_19 @BSBommai— Dr Sudhakar K (@mla_sudhakar) December 20, 2021